ಬೆಂಗಳೂರು: ಕನ್ನಡ ಸಂಗೀತ ಲೋಕದ ಎರಡು ಪ್ರತಿಭಾವಂತ ಕಲಾವಿದರು, ರಘು ದೀಕ್ಷಿತ್ ಮತ್ತು ವಾರಿಜಶ್ರೀ ವೇಣುಗೋಪಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ (ಅ.24) ಸರಳ ಹಾಗೂ ಆಪ್ತ ವಲಯದವರ ಸಮ್ಮುಖದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.


ಸಂಗೀತ ನಿರ್ದೇಶಕ, ಗಾಯಕ ಮತ್ತು ಜಾನಪದ ಸಂಯೋಜಕನಾಗಿ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದ 50 ವರ್ಷದ ರಘು ದೀಕ್ಷಿತ್ ಅವರಿಗೆ ಇದು ಎರಡನೇ ವಿವಾಹ. ಕೊಳಲು ವಾದಕಿ, ಗಾಯಕಿ ಹಾಗೂ ಗ್ರ್ಯಾಮಿ ನಾಮನಿರ್ದೇಶಿತ ಕಲಾವಿದೆ 34 ವರ್ಷದ ವಾರಿಜಶ್ರೀ ವೇಣುಗೋಪಾಲ್ ಅವರ ಸಂಗೀತ ಪ್ರತಿಭೆ ಈಗಾಗಲೇ ಅಂತಾರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದಿದೆ.

ನವ ಜೀವನಕ್ಕೆ ಕಾಲಿಟ್ಟ ಈ ಕಲಾವಿದ ಜೋಡಿಗೆ ಸಂಗೀತ ಜಗತ್ತಿನಿಂದಲೂ, ಅಭಿಮಾನಿಗಳಿಂದಲೂ ಹೃದಯಪೂರ್ವಕ ಅಭಿನಂದನೆಗಳು ಹರಿದುಬರುತ್ತಿದೆ.


