ಪ್ಯಾರಿಸ್: ವಿಶ್ವಪ್ರಸಿದ್ಧ ಲೌವ್ರೆ ಮ್ಯೂಸಿಯಂನಲ್ಲಿ ಹಾಡಹಗಲೇ ನಡೆದ ದರೋಡೆಯಲ್ಲಿ ಕಳ್ಳರು ಸುಮಾರು ₹100 ಕೋಟಿ ಮೌಲ್ಯದ ರಾಜಮನೆತನದ ಅಮೂಲ್ಯ ಆಭರಣಗಳನ್ನು ಕದ್ದಿದ್ದಾರೆ. ಕೇವಲ ಹತ್ತು ನಿಮಿಷಗಳಲ್ಲಿ ನಡೆದ ಈ ಕಳ್ಳತನವು ಜಗತ್ತಿನಾದ್ಯಂತ ಸಂಚಲನ ಉಂಟುಮಾಡಿದೆ.

ಪೋಲೀಸ್ ವರದಿ ಪ್ರಕಾರ, ಕಳ್ಳರು ವಾಹನಕ್ಕೆ ಅಳವಡಿಸಿದ ಲಿಫ್ಟ್‌ನ ಸಹಾಯದಿಂದ ಮ್ಯೂಸಿಯಂನ ಮೊದಲ ಮಹಡಿಯ ಕಿಟಕಿಗೆ ಹತ್ತಿ, ಗಾಜಿನ ಫಲಕಗಳನ್ನು ಒಡೆದು ಒಳನುಗ್ಗಿದ್ದಾರೆ. ಅವರು ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ನಂತರ ಸ್ಕೂಟರ್‌ಗಳಲ್ಲಿ ಪರಾರಿಯಾಗಿದ್ದಾರೆ.

ಕದ್ದೊಯ್ಯಲಾದ ವಸ್ತುಗಳಲ್ಲಿ ರಾಜಮನೆತನದ ಕಿರೀಟಗಳು, ಟಿಯಾರಾಗಳು, ಹಾರಗಳು ಹಾಗೂ ಬ್ರೂಚ್‌ಗಳು ಸೇರಿವೆ. ಇವುಗಳಲ್ಲಿ ಕೆಲವು ಎಂಪ್ರೆಸ್ ಯುಜೆನಿ, ಎಂಪ್ರೆಸ್ ಮೇರಿ ಲೂಯಿಸ್ ಹಾಗೂ ಕ್ವೀನ್ ಮೇರಿ ಅಮೆಲಿ ಅವರಿಗೆ ಸೇರಿದವು ಎಂದು ತಿಳಿದುಬಂದಿದೆ.

ಪೊಲೀಸರು ಎರಡು ವಸ್ತುಗಳನ್ನು (ಅದರಲ್ಲಿ ಒಂದು ಎಂಪ್ರೆಸ್ ಯುಜೆನಿಯವರ ಕಿರೀಟವನ್ನೂ ಸೇರಿದೆ) ವಶಪಡಿಸಿಕೊಂಡಿದ್ದಾರೆ.

