ಭಾರತವು ವಿಶ್ವ ಅರಣ್ಯ ಸಂಪನ್ಮೂಲ ಮೌಲ್ಯಮಾಪನ (Global Forest Resource Assessment – GFRA) 2025ರಲ್ಲಿ 9ನೇ ಸ್ಥಾನವನ್ನು ಗಳಿಸಿದೆ. ಹಿಂದಿನ ಮೌಲ್ಯಮಾಪನದಲ್ಲಿ ಭಾರತವು 10ನೇ ಸ್ಥಾನದಲ್ಲಿತ್ತು. ಅರಣ್ಯ ಪ್ರದೇಶದ ಪ್ರಮಾಣದಲ್ಲಿ ಒಂದು ಹಂತ ಮೇಲೇರಿರುವ ಭಾರತವು ಈಗ ವಿಶ್ವದ ಟಾಪ್ 10 ರಾಷ್ಟ್ರಗಳಲ್ಲಿ ತನ್ನ ಸ್ಥಾನವನ್ನು ಬಲಪಡಿಸಿದೆ.

ಈ ಮಾಹಿತಿಯನ್ನು ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಟಿಸಿದ್ದು, ವರದಿಯನ್ನು ಬಾಲಿಯಲ್ಲಿ ಬಿಡುಗಡೆ ಮಾಡಲಾಗಿದೆ.
ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಈ ಸಾಧನೆಯನ್ನು ದೇಶದ ಹೆಮ್ಮೆ ಎಂದು ವರ್ಣಿಸಿದ್ದು, ಮೋದಿ ಸರ್ಕಾರದ ಪರಿಣಾಮಕಾರಿ ಯೋಜನೆಗಳು, ಅರಣ್ಯ ಸಂರಕ್ಷಣೆ ನೀತಿಗಳು ಹಾಗೂ ರಾಜ್ಯ ಸರ್ಕಾರಗಳ ವ್ಯಾಪಕ ವನಸಂಪತ್ತು ವೃದ್ಧಿ ಪ್ರಯತ್ನಗಳ ಫಲವಾಗಿದೆ ಎಂದು ತಿಳಿಸಿದ್ದಾರೆ.

ಅವರು ಪ್ರಧಾನಿ ನರೇಂದ್ರ ಮೋದಿ ಅವರ “ಏಕ್ ಪೇಡ್ ಮಾ ಕೆ ನಾಮ್” ಅಭಿಯಾನವನ್ನು ಉಲ್ಲೇಖಿಸಿ, ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ಹಾಗೂ ಅರಣ್ಯಾರೋಪಣೆಯತ್ತ ಸಮೂಹದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಇದು ಮಹತ್ವದ ಹೆಜ್ಜೆ ಎಂದಿದ್ದಾರೆ.

