ಲಂಡನ್: ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸೃಜನಶೀಲತೆಯನ್ನು ಗೌರವಿಸುವ ಉದ್ದೇಶದಿಂದ ಬ್ರಿಟಿಷ್ ಮ್ಯೂಸಿಯಂನಲ್ಲಿ ಆಯೋಜಿಸಲಾದ ‘ಪಿಂಕ್ ಬಾಲ್’ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಹಾಗೂ ಅವರ ಮಗಳು ಇಶಾ ಅಂಬಾನಿ ಭಾಗವಹಿಸಿದರು.

ಈ ಕಾರ್ಯಕ್ರಮಕ್ಕೆ ಇಷಾ ಅಂಬಾನಿ ಸಹ-ಅಧ್ಯಕ್ಷತೆ ವಹಿಸಿದ್ದರು. ತಾಯಿಯ ಪ್ರೇರಣೆಯಿಂದಲೇ ಕಲಾ, ಸಂಗೀತ ಹಾಗೂ ಸಂಸ್ಕೃತಿಯ ಮೇಲಿನ ಆಸಕ್ತಿ ಬೆಳೆಯಿತು ಎಂದು ತಮ್ಮ ಭಾಷಣದಲ್ಲಿ ಇಶಾ ತಿಳಿಸಿದರು.
ಭಾರತದ ಕಾಲಾತೀತ ಪರಂಪರೆ ಮತ್ತು ಜಾಗತಿಕ ಕೀರ್ತಿಯನ್ನು ತೋರಿಸುವ ರೀತಿಯಲ್ಲಿ ನಡೆದ ಈ ಸಂಭ್ರಮವು ಅಂತರಾಷ್ಟ್ರೀಯ ಅತಿಥಿಗಳ ಗಮನ ಸೆಳೆಯಿತು. ನಿತಾ ಅಂಬಾನಿ ಅವರ ಉಪಸ್ಥಿತಿ ಹಾಗೂ ಇಶಾ ಅಂಬಾನಿಯ ಭಾಷಣವು ಭಾರತೀಯ ಸಂಸ್ಕೃತಿಯ ಅಂತರರಾಷ್ಟ್ರೀಯ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿತು.

