📰 ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ — ಯುವ ಪ್ರತಿಭೆ ಸುರೇಶ್ ಕುಮಾರ್ ಜಿ ಚಾರ್ವಾಕ ಅವರಿಗೆ ಸನ್ಮಾನ

📰 ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ — ಯುವ ಪ್ರತಿಭೆ ಸುರೇಶ್ ಕುಮಾರ್ ಜಿ ಚಾರ್ವಾಕ ಅವರಿಗೆ ಸನ್ಮಾನ

ಕಡಬ: ರಾಜ್ಯ ಮಟ್ಟದಲ್ಲಿ ಕವನ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಕೃತಿಗಳ ಮೂಲಕ ಹಲವು ಪ್ರಶಸ್ತಿಗಳನ್ನು ಗಳಿಸಿರುವ ಯುವ ಪ್ರತಿಭೆ ಸುರೇಶ್ ಕುಮಾರ್ ಜಿ ಚಾರ್ವಾಕ ಪಾಲ್ತಿಲ ಅವರಿಗೆ ಪ್ರೋತ್ಸಾಹದ ಗೌರವ ಲಭಿಸಿದೆ.

ಕಾಣಿಯೂರು ಗ್ರಾಮ, ಕಡಬ ತಾಲೂಕು, ದ.ಕ. — ದೀಪಾವಳಿ ಪ್ರಯುಕ್ತ ನಡೆದ ಪ್ರೊ ವಾಲಿಬಾಲ್ ಪಂದ್ಯಾಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ, ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ (ರಿ) ಪುಣ್ಯತ್ತಾರು ಸಂಸ್ಥೆಯ ವತಿಯಿಂದ ಸುರೇಶ್ ಕುಮಾರ್ ಅವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಸಾಹಿತ್ಯದ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಈಗಾಗಲೇ ಪಡೆದಿರುವ ಸುರೇಶ್ ಕುಮಾರ್ ಜಿ ಚಾರ್ವಾಕ ಪಾಲ್ತಿಲ ಅವರು ಚಾರ್ವಾಕ ಗ್ರಾಮದ ಪಾಲ್ತಿಲ ಕುಮಾರ್ ಮತ್ತು ಸರೋಜಿನಿ ದಂಪತಿಗಳ ಪುತ್ರರಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದು, ಯುವ ಪ್ರತಿಭೆಗೆ ಅಭಿನಂದನೆ ಸಲ್ಲಿಸಿದರು.

ರಾಜ್ಯ