ಪ್ರಧಾನಿ ಮೋದಿ, ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ದೀಪಾವಳಿ ಆಚರಣೆ – ‘ಆಪರೇಶನ್ ಸಿಂದೂರ’ ಯಶಸ್ಸಿಗೆ ಸಶಸ್ತ್ರ ಪಡೆಗಳ ಶ್ಲಾಘನೆ

ಪ್ರಧಾನಿ ಮೋದಿ, ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ದೀಪಾವಳಿ ಆಚರಣೆ – ‘ಆಪರೇಶನ್ ಸಿಂದೂರ’ ಯಶಸ್ಸಿಗೆ ಸಶಸ್ತ್ರ ಪಡೆಗಳ ಶ್ಲಾಘನೆ

ಗೋವಾ/ಕಾರವಾರ, ಅ. 20:
ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷವೂ ತಮ್ಮ ಸಂಪ್ರದಾಯವನ್ನು ಮುಂದುವರೆಸಿ, ಭಾರತೀಯ ನೌಕಾಪಡೆ ಯೋಧರೊಂದಿಗೆ ಐಎನ್‌ಎಸ್‌ ವಿಕ್ರಾಂತ್ ಹಡಗಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅವರು ಭಾರತೀಯ ಸಶಸ್ತ್ರ ಪಡೆಗಳ ಸಮನ್ವಯದ ಕಾರ್ಯದಕ್ಷತೆಯನ್ನು ಪ್ರಶಂಸಿಸಿ, “ಆಪರೇಶನ್ ಸಿಂದೂರ” ಯಶಸ್ಸಿಗೆ ಸೇನೆಗಳ ಶೌರ್ಯವೇ ಕಾರಣವೆಂದು ಹೇಳಿದರು.

ಭಾರತೀಯ ಸೇನೆಯ ಮೂರು ಪಡೆಗಳ ಅತ್ಯುತ್ತಮ ಸಂಯೋಜನೆಯಿಂದ ಪಾಕಿಸ್ತಾನವನ್ನು ಶರಣಾಗಲು ಕಾರಣವಾಯಿತು. “ಐಎನ್‌ಎಸ್‌ ವಿಕ್ರಾಂತ್‌ ಕೇವಲ ಯುದ್ಧನೌಕೆ ಮಾತ್ರವಲ್ಲ, ಅದು 21ನೇ ಶತಮಾನದ ಭಾರತದ ಸಾಮರ್ಥ್ಯ, ನವೀನತೆ ಮತ್ತು ಸ್ವಾಭಿಮಾನವನ್ನು ಪ್ರತಿಬಿಂಬಿಸುವ ಸ್ಮಾರಕವಾಗಿದೆ” ಎಂದು ಅವರು ತಿಳಿಸಿದರು.

ಐಎನ್‌ಎಸ್‌ ವಿಕ್ರಾಂತ್‌ ಭಾರತದ ಮೊದಲ ಸ್ವದೇಶೀ ವಿಮಾನವಾಹಕ ನೌಕೆ ಆಗಿದ್ದು, ‘ಆತ್ಮನಿರ್ಭರ ಭಾರತ’ದ ಸಂಕೇತವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಅವರು ಭದ್ರತಾ ಪಡೆಗಳ ಧೈರ್ಯ ಮತ್ತು ಸಂಕಲ್ಪವನ್ನು ಮೆಚ್ಚಿ, “ಅವರ ಶೌರ್ಯದಿಂದಲೇ ದೇಶವು ಮಾವೋವಾದಿ ಭಯೋತ್ಪಾದನೆಗೆ ಅಂತ್ಯಮಾಡಿದೆ” ಎಂದರು.

ಏಪ್ರಿಲ್‌ 22ರಂದು ಜಮ್ಮು-ಕಾಶ್ಮೀರದ ಪಹಾಲ್ಗಾಂ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಮೇ 7ರಂದು ಭಾರತೀಯ ಸೇನೆಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಪಾಕಿಸ್ತಾನದ ವಿವಿಧ ಭಯೋತ್ಪಾದಕ ಕೇಂದ್ರಗಳ ಮೇಲೆ “ಆಪರೇಶನ್ ಸಿಂದೂರ” ಹೆಸರಿನ ಅಚ್ಚುಕಟ್ಟಾದ ದಾಳಿ ನಡೆಸಿ ಯಶಸ್ಸು ಸಾಧಿಸಿದ್ದವು.

ನೌಕಾಪಡೆಯ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಹೇಳಿದರು, “ಇಂದು ಒಂದು ಅದ್ಭುತ ದಿನ — ಒಂದು ಕಡೆ ಸಮುದ್ರದ ಆಳ, ಮತ್ತೊಂದು ಕಡೆ ಭಾರತದ ಧೀರ ಸೈನಿಕರ ಶಕ್ತಿ. ಸಮುದ್ರದ ಮೇಲೆ ಸೂರ್ಯನ ಕಿರಣಗಳ ಪ್ರಭೆಯಂತೆಯೇ ನಿಮ್ಮ ಧೈರ್ಯ ದೀಪಾವಳಿಯ ದೀಪಗಳಂತೆ ಹೊಳೆಯುತ್ತಿದೆ,” ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ಮೊದಲ ವರ್ಷದಲ್ಲಿ ಲಡಾಖ್‌ನ ಸಿಯಾಚಿನ್ ಹಿಮನದಿಯಲ್ಲಿರುವ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. ಕಳೆದ ವರ್ಷ ಅವರು ಸರ್ ಕ್ರೀಕ್‌ನಲ್ಲಿ ಕರಾವಳಿ ರಕ್ಷಣಾ ಪಡೆಯೊಂದಿಗೆ ಹಬ್ಬವನ್ನು ಆಚರಿಸಿದ್ದರು. ಈ ಬಾರಿ ಅವರು ನೌಕಾಪಡೆಯ ಸೈನಿಕರೊಂದಿಗೆ ದೀಪಾವಳಿ ಆಚರಿಸಿ ತಮ್ಮ ಪರಂಪರೆಯನ್ನು ಮುಂದುವರೆಸಿದರು.

ರಾಷ್ಟ್ರೀಯ