ರಾಷ್ಟ್ರ ಹೆದ್ದಾರಿ ಶುಲ್ಕ ನಿಯಮಗಳಲ್ಲಿ ತಿದ್ದುಪಡಿ: ನವೆಂಬರ್ 15ರಿಂದ ಹೊಸ ನಿಯಮ ಜಾರಿಗೆ

ರಾಷ್ಟ್ರ ಹೆದ್ದಾರಿ ಶುಲ್ಕ ನಿಯಮಗಳಲ್ಲಿ ತಿದ್ದುಪಡಿ: ನವೆಂಬರ್ 15ರಿಂದ ಹೊಸ ನಿಯಮ ಜಾರಿಗೆ

ನವದೆಹಲಿ: ಕೇಂದ್ರ ಸರ್ಕಾರವು ರಾಷ್ಟ್ರ ಹೆದ್ದಾರಿ ಹೆದ್ದಾರಿ ಶುಲ್ಕ (ದರ ನಿಗದಿ ಹಾಗೂ ಸಂಗ್ರಹ) ನಿಯಮ, 2008 ರಲ್ಲಿ ಪ್ರಮುಖ ತಿದ್ದುಪಡಿಯನ್ನು ಘೋಷಿಸಿದೆ. ಹೊಸ ನಿಯಮ ಪ್ರಕಾರ, ನವೆಂಬರ್ 15ರಿಂದ ಶುಲ್ಕ ಪಾವತಿ ವಿಧಾನದಲ್ಲಿ ಬದಲಾವಣೆ ಆಗಲಿದೆ.

ಹೊಸ ನಿಯಮದಂತೆ, ಮಾನ್ಯ ಮತ್ತು ಕಾರ್ಯನಿರ್ವಹಣೆಯಲ್ಲಿರುವ FASTag ಇಲ್ಲದೇ ಟೋಲ್ ಪ್ಲಾಜಾದಲ್ಲಿ ಪ್ರವೇಶಿಸುವ ವಾಹನಗಳಿಂದ ನಗದು ಮೂಲಕ ಪಾವತಿ ಮಾಡಿದರೆ, ಅವರ ಮೇಲೆ ಎರಡು ಪಟ್ಟು ಶುಲ್ಕ ವಿಧಿಸಲಾಗುತ್ತದೆ.

ಆದರೆ, FASTag ಬದಲಿಗೆ ಯುಪಿಐ (UPI) ಮೂಲಕ ಪಾವತಿ ಮಾಡುವ ವಾಹನ ಮಾಲೀಕರು ತಮ್ಮ ವರ್ಗದ ವಾಹನಕ್ಕೆ ಅನ್ವಯಿಸುವ ಶುಲ್ಕದ 1.25 ಪಟ್ಟು ಮಾತ್ರ ಪಾವತಿಸಬೇಕಾಗುತ್ತದೆ.

ಸರ್ಕಾರವು ಈ ಕ್ರಮದ ಮೂಲಕ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸುವುದರ ಜೊತೆಗೆ, ಟೋಲ್ ಪ್ಲಾಜಾಗಳಲ್ಲಿ ಸಂಚಾರದ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.

ಹೊಸ ನಿಯಮಗಳು ದೇಶದಾದ್ಯಂತ ನವೆಂಬರ್ 15ರಿಂದ ಜಾರಿಗೆ ಬರುವುದಾಗಿ ಸಾರಿಗೆ ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ