ಸೇವಾಭಾರತಿ ತಂಡದಿಂದ ಡಾ. ಎಂ. ಮೋಹನ್ ಆಳ್ವರವರ ಭೇಟಿ

ಸೇವಾಭಾರತಿ ತಂಡದಿಂದ ಡಾ. ಎಂ. ಮೋಹನ್ ಆಳ್ವರವರ ಭೇಟಿ

ಮೂಡುಬಿದಿರೆ (ಅ.01): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರವರನ್ನು ಅಕ್ಟೋಬರ್ 01ರಂದು ಸೇವಾಭಾರತಿ ತಂಡವು ಭೇಟಿಯಾಗಿ, ಸೇವಾಧಾಮದ ಮುಖಾಂತರ ನಡೆಯುತ್ತಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಸೇವೆಗಳ ಬಗ್ಗೆ ಚರ್ಚಿಸಿತು.

ಇದೇ ಸಂದರ್ಭದಲ್ಲಿ, ಕನ್ಯಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ಕುರಿತು ಪ್ರಸ್ತಾಪಿಸಲಾಯಿತು. ಈ ಹಿಂದೆ ಸೇವಾಧಾಮದ ಕಾರ್ಯಚಟುವಟಿಕೆಗಳಿಗೆ ನೀಡಿದ ಸಹಕಾರಕ್ಕಾಗಿ ಡಾ. ಆಳ್ವರವರ ತಂಡಕ್ಕೆ ಸೇವಾಭಾರತಿ ಪರವಾಗಿ ಧನ್ಯವಾದ ಸಲ್ಲಿಸಲಾಗಿದ್ದು, ಮುಂದಿನ ಕಾರ್ಯಗಳಲ್ಲಿಯೂ ಸಹಕರಿಸುವಂತೆ ಮನವಿ ಮಾಡಲಾಯಿತು.

ಸಭೆಯಲ್ಲಿ ಸೇವಾಧಾಮ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಹಾಗೂ ಕು. ರಚನ ಗುಡಿಗಾರ್ ಉಪಸ್ಥಿತರಿದ್ದರು.

ರಾಜ್ಯ