ತಮಿಳುನಾಡಿನಲ್ಲಿ ಮತ್ತೊಂದು ದುರ್ಘಟನೆ – 9 ಮಂದಿ ಅಸ್ಸಾಂ ಮೂಲದ ಕಾರ್ಮಿಕರ ದಾರುಣ ಸಾವು

ತಮಿಳುನಾಡಿನಲ್ಲಿ ಮತ್ತೊಂದು ದುರ್ಘಟನೆ – 9 ಮಂದಿ ಅಸ್ಸಾಂ ಮೂಲದ ಕಾರ್ಮಿಕರ ದಾರುಣ ಸಾವು

ತಮಿಳುನಾಡಿನ ಪೊನ್ನೇರಿಯ ಎಣ್ಣೋರ್ ಬಿಎಚ್‌ಇಎಲ್‌ ತಾಪ ವಿದ್ಯುತ್ ಘಟಕದ ನಿರ್ಮಾಣ ಕಾರ್ಯದಲ್ಲಿ ಭೀಕರ ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಆರ್ಚ್ ಕುಸಿದ ಪರಿಣಾಮ, ಕೆಳಗೆ ಬಿದ್ದ 9 ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನೂ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚೆನ್ನೈನ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಸಮಯದಲ್ಲಿ ಕಾರ್ಮಿಕರು ಸೂಕ್ತ ಸುರಕ್ಷತಾ ಸಾಧನಗಳನ್ನು ಧರಿಸದೆ ಕೆಲಸ ಮಾಡುತ್ತಿದ್ದರೆಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಮೃತಪಟ್ಟವರು ಅಸ್ಸಾಂ ಮೂಲದವರಾಗಿದ್ದು, ಅವರು ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ದುಃಖ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಮೃತದೇಹಗಳನ್ನು ಅಸ್ಸಾಂಗೆ ಸಾಗಿಸಲು ಸರ್ಕಾರದ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದ್ದಾರೆ.

ಅಪರಾಧ ರಾಷ್ಟ್ರೀಯ