ಏಷ್ಯಾ ಕಪ್ ಕ್ರಿಕೆಟ್ ಪೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 5 ವಿಕೆಟ್ ನಿಂದ ಸೋಲಿಸಿ ಕಪ್ ಗೆದ್ದುಕೊಂಡಿದೆ. 146 ರನ್ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲಿ ತನ್ನ ಪ್ರಮುಖ 2 ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿತ್ತು, ನಂತರ ಗಿಲ್ ಜೊತೆಯಾದ ತಿಲಕ್ ವರ್ಮಾ ಆರಂಭದಲ್ಲಿ ತಾಳ್ಮೆಯ ಆಟ ಪ್ರದರ್ಶಿಸಿದರು ಗಿಲ್ ಔಟ್ ಆದ ಬಳಿಕ ಸಂಜು ಸ್ಯಾಮ್ಸನ್ ಜೊತೆ ಆಟದ ವೇಗ ಹೆಚ್ಚಿಸಿ ಗೆಲ್ಲುವ ಭರವಸೆ ಮೂಡಿಸಿದರು.


ಸಂಜು ಸ್ಯಾಮ್ಸನ್ ಔಟ್ ಆದ ಬಳಿಕ ಶಿವಂ ದುಬೆ ಜೊತೆ ಎಚ್ಚರಿಕೆ ಮತ್ತು ಆಕ್ರಮಣಕಾರಿ ಆಟ ಆಡಿದ ವರ್ಮಾ ಕೊನೆಯ ಓವರ್ ನಲ್ಲಿ ಸಿಕ್ಸರ್ ಹೊಡೆಯುವ ಮೂಲಕ ಗೆಲುವು ಖಾತರಿ ಪಡಿಸಿದರು. ಅಂತಿಮವಾಗಿ ರಿಂಕು ಸಿಂಗ್ ಫೋರ್ ಹೊಡೆದು ಗುರಿಯನ್ನು ತಲುಪಿಸಿದರು.ಈ ಜಯದೊಂದಿಗೆ ಭಾರತ 9ನೇ ಬಾರಿ ಏಷ್ಯಾ ಕಪ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.

