ನವದೆಹಲಿ: ಏರ್ ಇಂಡಿಯಾ ವಿಮಾನ ದುರಂತ ಪ್ರಕರಣದಲ್ಲಿ ಪೈಲಟ್‌ಗಳ ವಿರುದ್ಧ ನೇರ ಹೊಣೆಗಾರಿಕೆಯನ್ನು ಹಾಕುವುದು ಅತ್ಯಂತ ಜವಾಬ್ದಾರಿಯಿಲ್ಲದ ನಡೆ ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಎಚ್ಚರಿಸಿದೆ.

“ಕುಟುಂಬಗಳು ಆಘಾತ ಅನುಭವಿಸುತ್ತವೆ”
ನ್ಯಾಯಮೂರ್ತಿಗಳಾದ ಸುರ್ಯಕಾಂತ್ ಮತ್ತು ಎನ್. ಕೋಟೀಸ್ವರ್ ಸಿಂಗ್ ಅವರ ಪೀಠವು, “ಯಾರಾದರೂ ಪೈಲಟ್ ತಪ್ಪುಮಾಡಿದ್ದಾರೆ ಎಂದು ಪ್ರಾಥಮಿಕ ವರದಿ ಆಧರಿಸಿ ಹೇಳಿದರೆ, ಅವರ ಕುಟುಂಬಗಳಿಗೆ ದೊಡ್ಡ ಆಘಾತವಾಗುತ್ತದೆ. ನಂತರ ಅಂತಿಮ ವರದಿ ಬೇರೆ ಕಾರಣಗಳನ್ನು ತೋರಿಸಿದರೆ ಏನು?” ಎಂದು ಪ್ರಶ್ನಿಸಿತು.
ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಮನವಿಯಲ್ಲಿ, ದಿ ವಾಲ್ ಸ್ಟ್ರೀಟ್ ಜರ್ನಲ್ ಅಮೆರಿಕಾದ ಮಾಧ್ಯಮವು ವರದಿ ಸಲ್ಲಿಸುವ ಮೊದಲುಲೇ ತನಿಖಾ ಮಾಹಿತಿಯನ್ನು ಪ್ರಕಟಿಸಿದೆ ಎಂದು ಕೋರ್ಟ್ ಗಮನಕ್ಕೆ ತರಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸುರ್ಯಕಾಂತ್, “ಒಬ್ಬ ಪೈಲಟ್ ಆತ್ಮಹತ್ಯೆ ಪ್ರವೃತ್ತಿಯವರು” ಎಂಬಂತೆ ಪ್ರಸಾರ ಮಾಡಿರುವ ವರದಿಗಳನ್ನು “ಅತ್ಯಂತ ಬೇಜವಾಬ್ದಾರಿ ವರದಿ” ಎಂದು ಕಠಿಣವಾಗಿ ಟೀಕಿಸಿದರು.
ಮನವಿಯಲ್ಲಿ, ಜುಲೈ 12ರಂದು ಬಿಡುಗಡೆಗೊಂಡ ಪ್ರಾಥಮಿಕ ವರದಿಯಲ್ಲಿ ‘ಫ್ಯೂಲ್ ಕಟ್‌ಆಫ್ ಸ್ವಿಚ್‌ಗಳನ್ನು ಬದಲಾಯಿಸಲಾಗಿದೆ’ ಎಂದು ಹೇಳಿ ಪೈಲಟ್ ದೋಷವನ್ನು ಸೂಚಿಸಲಾಗಿದೆ ಎಂದು ತಿಳಿಸಿದೆ. ಆದರೆ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR), ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (CVR) ಸಂಪೂರ್ಣ ವಿವರ, ಹಾಗೂ ಎಲೆಕ್ಟ್ರಾನಿಕ್ ಏರ್‌ಕ್ರಾಫ್ಟ್ ಫಾಲ್ಟ್ ರೆಕಾರ್ಡಿಂಗ್ ಮಾಹಿತಿ ಬಹಿರಂಗಪಡಿಸಿಲ್ಲವೆಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ಸಮಗ್ರ, ಪಾರದರ್ಶಕ ಮತ್ತು ವೇಗದ ತನಿಖೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

