ಉಡುಪಿ, ಶಿರ್ವ: ಕಟಪಾಡಿ ಸಮೀಪದ ಸುಭಾಷ್ ನಗರದಲ್ಲಿ ಸುಳ್ಳು ಆರೋಪಗಳಿಂದ ಬೇಸತ್ತ ಶೇಕ್ ಅಬ್ದುಲ್ಲಾ (38) ಎಂಬ ವ್ಯಕ್ತಿ ರವಿವಾರ ರಾತ್ರಿ ವಿಡಿಯೋ ಚಿತ್ರೀಕರಣ ಮಾಡಿ ಜೀವಾಂತ್ಯ ಮಾಡಿಕೊಂಡ ದಾರುಣ ಘಟನೆ ನಡೆದಿದೆ.

ಮೃತರು ತಮ್ಮ ಸಾವಿಗೆ ಮಿಸಾಲ್, ಮಿಸಾಲ್ ಅವರ ತಾಯಿ ಹಾಗೂ ತಂಗಿಯೇ ಕಾರಣವೆಂದು ವಿಡಿಯೋದಲ್ಲಿ ಆರೋಪಿಸಿದ್ದು, ಇದೀಗ ಆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಸಂಬಂಧ ಮೃತರ ಸಹೋದರ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

