ಹೊಸದಿಲ್ಲಿಯಲ್ಲಿ 13 ವರ್ಷದ ಅಫ್ಘನ್ ಬಾಲಕ ವಿಮಾನದ ಚಕ್ರದಲ್ಲಿ ಅವಿತು ಜೀವಂತವಾಗಿ ಬಂದಿಳಿದ ಘಟನೆ!

ಹೊಸದಿಲ್ಲಿಯಲ್ಲಿ 13 ವರ್ಷದ ಅಫ್ಘನ್ ಬಾಲಕ ವಿಮಾನದ ಚಕ್ರದಲ್ಲಿ ಅವಿತು ಜೀವಂತವಾಗಿ ಬಂದಿಳಿದ ಘಟನೆ!

13 ವರ್ಷದ ಅಫ್ಘನ್ ಬಾಲಕನೊಬ್ಬ ವಿಮಾನದ ಹಿಂಬದಿ ಚಕ್ರದಲ್ಲಿ ಅವಿತಿಟ್ಟುಕೊಂಡು ಜೀವಂತವಾಗಿ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿರುವ ಘಟನೆ ಬೆಳಕಿಗೆ ಬಂದಿದೆ.

94 ನಿಮಿಷಗಳ ಈ ಅಪಾಯಕಾರಿ ಪ್ರಯಾಣದಲ್ಲಿ ಬಾಲಕ ಜೀವಂತವಾಗಿ ಬದುಕುಳಿದು, ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಿರ ಆರೋಗ್ಯ ಸ್ಥಿತಿಯೊಂದಿಗೆ ಪತ್ತೆಯಾಗಿದ್ದಾನೆ.

ಮಾಹಿತಿಯ ಪ್ರಕಾರ, ಈ ಘಟನೆ ಅಫ್ಘಾನಿಸ್ತಾನದ ಕೆಎಎಂ ಏರ್‌ನ RQ-4401 ವಿಮಾನದಲ್ಲಿ ನಡೆದಿದೆ. Flightradar24.com ಮಾಹಿತಿ ಪ್ರಕಾರ, ಬೆಳಿಗ್ಗೆ 8.46ಕ್ಕೆ ಕಾಬೂಲ್‌ನ ಹಮೀದ್ ಕರ್ಝೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಏರ್‌ಬಸ್ 340, ಬೆಳಿಗ್ಗೆ 10.20ಕ್ಕೆ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 3ನೇ ಟರ್ಮಿನಲ್‌ಗೆ ಭೂಸ್ಪರ್ಶ ಮಾಡಿತು.

ಕುರ್ತಾ ಮತ್ತು ಪೈಜಾಮಾ ಧರಿಸಿದ್ದ ಬಾಲಕನು ಮೂಲತಃ ಇರಾನ್‌ಗೆ ಕಳ್ಳ ಮಾರ್ಗದಲ್ಲಿ ಹೋಗುವ ಉದ್ದೇಶ ಹೊಂದಿದ್ದ. ಆದರೆ ತಪ್ಪಾಗಿ ಈ ವಿಮಾನಕ್ಕೆ ಏರಿದ್ದಾನೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಹಿಂದೆ ಬಚ್ಚಿಕೊಂಡು ವಿಮಾನಕ್ಕೆ ಪ್ರವೇಶ ಪಡೆದಿದ್ದಾನೆ ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ.

ವಿಮಾನ ಇಳಿದ ಬಳಿಕ, ಟ್ಯಾಕ್ಸಿವೇಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗ್ರೌಂಡ್ ಹ್ಯಾಂಡ್ಲಿಂಗ್ ಸಿಬ್ಬಂದಿಯೊಬ್ಬನು ಬಾಲಕನನ್ನು ಪತ್ತೆಹಚ್ಚಿ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ. ಬಳಿಕ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಬಾಲಕನನ್ನು ವಶಕ್ಕೆ ಪಡೆದು, ಅಗತ್ಯ ವೈದ್ಯಕೀಯ ತಪಾಸಣೆ ಮತ್ತು ವಿಚಾರಣೆ ನಡೆಸಿತು

ಅಂತರಾಷ್ಟ್ರೀಯ ಅಪರಾಧ