ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ: ಸಂಸದ ಸಸಿಕಾಂತ್ ಸೆಂಥಿಲ್ ದೂರು ವಿಚಾರಣೆಗೆ ಕೋರ್ಟ್ ಅನುಮತಿ

ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ: ಸಂಸದ ಸಸಿಕಾಂತ್ ಸೆಂಥಿಲ್ ದೂರು ವಿಚಾರಣೆಗೆ ಕೋರ್ಟ್ ಅನುಮತಿ

ಬೆಂಗಳೂರು: ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಸಲ್ಲಿಸಿದ್ದ ಮಾನನಷ್ಟ ದೂರುಗೆ ಕೋರ್ಟ್ ವಿಚಾರಣೆಗೆ ಅಂಗೀಕಾರ ನೀಡಿದೆ.

ಸೆಂಥಿಲ್ ಅವರ ಹೇಳಿಕೆಯ ಪ್ರಕಾರ, ಜನಾರ್ದನ ರೆಡ್ಡಿ ಇತ್ತೀಚೆಗೆ ನೀಡಿದ ಸಾರ್ವಜನಿಕ ಹೇಳಿಕೆಗಳು ತಮ್ಮ ಗೌರವ ಮತ್ತು ರಾಜಕೀಯ ಬದುಕಿಗೆ ಧಕ್ಕೆ ತಂದಿವೆ. ಈ ಹಿನ್ನೆಲೆಯಲ್ಲಿ ಅವರು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.

ನಗರ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ದೂರು ದಾಖಲಿಸಿಕೊಂಡು, ವಿಚಾರಣೆ ಮುಂದುವರಿಸಲು ಅನುಮತಿ ನೀಡಿದೆ. ಮುಂದಿನ ಹಂತದಲ್ಲಿ ಪ್ರತಿವಾದಿಗೆ ಸಮನ್ಸ್ ಜಾರಿ ಆಗುವ ನಿರೀಕ್ಷೆಯಿದೆ.

ಅಪರಾಧ ರಾಜ್ಯ