ಹೈದರಾಬಾದ್, ಸೆಪ್ಟೆಂಬರ್ 20, 2025:
ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ಪವನ್ ಕಲ್ಯಾಣ್ ನಟನೆಯ ಹೊಸ ಸಿನಿಮಾ ‘ಓಜಿ’ ಬಿಡುಗಡೆಯ ಮುನ್ನವೇ ವಿವಾದಕ್ಕೆ ಸಿಲುಕಿದೆ. ತೆಲಂಗಾಣ ಸರ್ಕಾರ ಸಿನಿಮಾದ ಹೆಚ್ಚುವರಿ ಶೋಗಳಿಗೆ ಅನುಮತಿ ನೀಡುವುದನ್ನು ತಿರಸ್ಕರಿಸಿದೆ.

ಆಂಧ್ರ ಸರ್ಕಾರ ಮಾತ್ರ ನಿರೀಕ್ಷೆಯಂತೆ ಹೆಚ್ಚುವರಿ ಶೋ ಹಾಗೂ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದ್ದರೆ, ತೆಲಂಗಾಣದಲ್ಲಿ ಮೊದಲ ನಾಲ್ಕು ದಿನ ಮಾತ್ರ ಟಿಕೆಟ್ ದರ ಹೆಚ್ಚಳಕ್ಕೆ ಅವಕಾಶವಿದೆ. ಆದರೆ ಮಧ್ಯರಾತ್ರಿ 1 ಗಂಟೆಯ ಶೋಗಳಿಗೆ ಸ್ಪಷ್ಟ ನಿರಾಕರಣೆ ನೀಡಲಾಗಿದೆ.
ತೆಲಂಗಾಣ ಸರ್ಕಾರದ ಪ್ರಕಾರ, ‘ಪುಷ್ಪ 2’ ಬಿಡುಗಡೆ ಸಂದರ್ಭ ನಡೆದ ಅವಘಡದ ಬಳಿಕ ಮಧ್ಯರಾತ್ರಿ ಶೋಗಳಿಗೆ ಅನುಮತಿ ನೀಡುವುದಿಲ್ಲ. ಹೀಗಾಗಿ ಪವನ್ ಕಲ್ಯಾಣ್ ಸಿನಿಮಾ ಕೂಡ ಅದೇ ನಿಯಮಕ್ಕೆ ಒಳಪಟ್ಟಿದೆ. ಆದಾಗ್ಯೂ ಸೆಪ್ಟೆಂಬರ್ 24ರ ರಾತ್ರಿ 9 ಗಂಟೆಯಿಂದ ಶೋ ಆರಂಭಿಸಲು ಮಾತ್ರ ಅವಕಾಶ ನೀಡಲಾಗಿದೆ.
‘ಓಜಿ’ ಚಿತ್ರವನ್ನು ಸುಜೀತ್ ನಿರ್ದೇಶಿಸಿದ್ದು, ಡಿವಿವಿ ದಯಾನಂದ ನಿರ್ಮಾಣ ಮಾಡಿದ್ದಾರೆ. ಬಾಲಿವುಡ್ ನಟ ಇಮ್ರಾನ್ ಹಾಶ್ಮಿ ಖಳನಾಯಕನಾಗಿ, ಪ್ರಿಯಾಂಕಾ ಮೋಹನ್ ನಾಯಕಿಯಾಗಿ ನಟಿಸಿದ್ದಾರೆ.

