ಕನ್ನಡಿಗರಿಂದಲೇ  ಕಾಂತಾರ ಚಾಪ್ಟರ್ 1 ಕನ್ನಡ ಟ್ರೈಲರ್‌ ರಿಲೀಸ್ – ರಿಷಬ್ ಶೆಟ್ಟಿಯ ಕನ್ನಡ ಪ್ರೀತಿ

ಕನ್ನಡಿಗರಿಂದಲೇ ಕಾಂತಾರ ಚಾಪ್ಟರ್ 1 ಕನ್ನಡ ಟ್ರೈಲರ್‌ ರಿಲೀಸ್ – ರಿಷಬ್ ಶೆಟ್ಟಿಯ ಕನ್ನಡ ಪ್ರೀತಿ

ಕಾಂತಾರ ಚಾಪ್ಟರ್ ಒನ್ ಚಿತ್ರದ ಕನ್ನಡ ಟ್ರೈಲರ್‌ನ್ನು ಕನ್ನಡಿಗರಿಂದಲೇ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಕನ್ನಡ ಪ್ರೀತಿಯನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಬಹುಭಾಷೆಗಳಲ್ಲಿ ತೆರೆಕಾಣುತ್ತಿರುವ ಈ ಚಿತ್ರದ ಟ್ರೈಲರ್‌ಗಳನ್ನು ಪ್ರತಿ ಭಾಷೆಯ ಪ್ರಮುಖ ತಾರೆಗಳೇ ಬಿಡುಗಡೆ ಮಾಡುತ್ತಿದ್ದಾರೆ. ಪ್ರಭಾಸ್ (ತೆಲುಗು), ಪೃಥ್ವಿರಾಜ್ ಸುಕುಮಾರನ್ (ಮಲೆಯಾಳಂ), ಹೃತಿಕ್ ರೋಷನ್ (ಹಿಂದಿ) ಟ್ರೈಲರ್‌ಗಳನ್ನು ಬಿಡುಗಡೆ ಮಾಡುವಾಗ, ಕನ್ನಡದ ಟ್ರೈಲರ್ ಬಿಡುಗಡೆಗೆ ಕನ್ನಡಿಗರನ್ನೇ ಆರಿಸುವ ಮೂಲಕ ರಿಷಬ್ ಶೆಟ್ಟಿಯವರು ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಮನೋರಂಜನೆ ರಾಜ್ಯ ರಾಷ್ಟ್ರೀಯ