ಭಾರತದ ಏಳು ನೈಸರ್ಗಿಕ ಸ್ಮಾರಕಗಳು UNESCO-ಯ ತಾತ್ಕಾಲಿಕ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡಿವೆ. ಮಹಾರಾಷ್ಟ್ರದ ಪಂಚಗಣಿ ಮತ್ತು ಮಹಾಬಲೇಶ್ವರದ ಡೆಕ್ಕನ್ ಟ್ರಾಪ್ಸ್, ಕರ್ನಾಟಕದ ಸೇಂಟ್ ಮೇರೀಸ್ ದ್ವೀಪಗಳ ಗುಂಪು, ಮೇಘಾಲಯದ ಈಸ್ಟ್ ಖಾಸಿ ಹಿಲ್ಸ್‌ನ ಮೇಘಾಲಯನ್ ಏಜ್ ಗುಹೆಗಳು, ನಾಗಾಲ್ಯಾಂಡ್‌ನ ಕಿಫೈರೆಯ ನಗಾ ಹಿಲ್ ಓಫಿಯೋಲೈಟ್, ಆಂಧ್ರಪ್ರದೇಶದ ವಿಶಾಖಪಟ್ಟಣದ ಬಳಿ ಇರುವ ಎರ್ರ ಮಟ್ಟಿ ದಿಬ್ಬಲು (ಕೆಂಪು ಮರಳು ಗುಡ್ಡಗಳು) ಹಾಗೂ ತಿರುಮಲ ಬೆಟ್ಟಗಳ ನೈಸರ್ಗಿಕ ಸ್ಮಾರಕಗಳು, ಜೊತೆಗೆ ಕೇರಳದ ವರ್ಕಳದ ಬಂಡೆಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಈ ಸೇರ್ಪಡೆಯೊಂದಿಗೆ ಭಾರತದಿಂದ ಒಟ್ಟು 69 ಸ್ಮಾರಕಗಳು ಯುನೆಸ್ಕೋದ Tentative Listನಲ್ಲಿ ಸೇರಿವೆ. ಇದರಲ್ಲಿ 49 ಸಾಂಸ್ಕೃತಿಕ, 17 ನೈಸರ್ಗಿಕ ಹಾಗೂ 3 ಮಿಶ್ರ ಪಾರಂಪರಿಕ ಸ್ಮಾರಕಗಳು ಸೇರಿವೆ. Tentative Listಗೆ ಸೇರ್ಪಡೆಗೊಳ್ಳುವುದು ವಿಶ್ವ ಪಾರಂಪರಿಕ ಪಟ್ಟಿಗೆ ಆಯ್ಕೆಯಾಗುವ ಪ್ರಕ್ರಿಯೆಯ ಪ್ರಥಮ ಹಂತವಾಗಿದ್ದು, ಈ ಸ್ಥಳಗಳ ಜಾಗತಿಕ ಮಾನ್ಯತೆ, ಪ್ರವಾಸೋದ್ಯಮದ ಉತ್ತೇಜನ ಹಾಗೂ ಸಂರಕ್ಷಣೆಗೆ ಹೊಸ ದಾರಿ ತೆರೆದಿದೆ.

