ಭಾರತೀಯ ಕರಾವಳಿ ಗಾರ್ಡ್ ಶಕ್ತಿವರ್ಧನೆ – ‘ಅಕ್ಷರ್’ ಪೇಟ್ರೋಲ್ ವೆಸಲ್ ಸೇವೆಗೆ

ಭಾರತೀಯ ಕರಾವಳಿ ಗಾರ್ಡ್ ಶಕ್ತಿವರ್ಧನೆ – ‘ಅಕ್ಷರ್’ ಪೇಟ್ರೋಲ್ ವೆಸಲ್ ಸೇವೆಗೆ

ನವದೆಹಲಿ: ಭಾರತದ ಸಮುದ್ರ ಶಕ್ತಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ಕರಾವಳಿ ಗಾರ್ಡ್ ಇಂದು ‘ಅಕ್ಷರ್’ ಹೆಸರಿನ ವೇಗದ ಪೇಟ್ರೋಲ್ ವೆಸಲ್ (Fast Patrol Vessel) ಅನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿದೆ.

ಇದು ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ವತಿಯಿಂದ ನಿರ್ಮಿಸಲ್ಪಟ್ಟ 08 FPV ಯೋಜನೆಯಡಿ ಎರಡನೇ ಪೇಟ್ರೋಲ್ ವೆಸಲ್ ಆಗಿದೆ. ಸಮುದ್ರದ ಗಡಿ ಭದ್ರತೆ, ಕಳ್ಳಸಾಗಣೆ ತಡೆ ಹಾಗೂ ತುರ್ತು ಕಾರ್ಯಾಚರಣೆಗಳಲ್ಲಿ ಈ ನೌಕೆ ಮಹತ್ವದ ಪಾತ್ರವಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

‘ಅಕ್ಷರ್’ ನ ಸೇರ್ಪಡೆ ಭಾರತೀಯ ಕರಾವಳಿ ಗಾರ್ಡ್‌ಗೆ ಹೊಸ ತಂತ್ರಜ್ಞಾನ ಹಾಗೂ ಕಾರ್ಯಚಟುವಟಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಲಿದೆ.

ರಾಷ್ಟ್ರೀಯ