ತಾಯಿ-ಮಗಳು ಒಂದೇ ವ್ಯಕ್ತಿಯಿಂದ ಗರ್ಭಿಣಿ: ಯೂಟ್ಯೂಬರ್ ನಿಕ್ ಯಾರ್ಡಿ ಘೋಷಣೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣ

ತಾಯಿ-ಮಗಳು ಒಂದೇ ವ್ಯಕ್ತಿಯಿಂದ ಗರ್ಭಿಣಿ: ಯೂಟ್ಯೂಬರ್ ನಿಕ್ ಯಾರ್ಡಿ ಘೋಷಣೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣ

29 ವರ್ಷದ ಯೂಟ್ಯೂಬರ್ ನಿಕ್ ಯಾರ್ಡಿ (Nick Yardy), 3.41 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಕ್ರಿಯೇಟರ್‌, ಕಳೆದ ತಿಂಗಳು ಮಾಡಿದ್ದ ಘೋಷಣೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಯಾರ್ಡಿ ಹೇಳಿಕೆಯ ಪ್ರಕಾರ, ತನ್ನ 22 ವರ್ಷದ ಪ್ರಿಯತಮೆ ಜೆಡ್ (Jade) ಹಾಗೂ ಆಕೆಯ 44 ವರ್ಷದ ತಾಯಿ ಡ್ಯಾನಿ (Dani) ಇಬ್ಬರೂ ತಮ್ಮ ಮಕ್ಕಳಿಗೆ ಗರ್ಭಿಣಿಯರಾಗಿ ಇದ್ದಾರೆ.

ಈ ಘೋಷಣೆ ಹೊರಬಿದ್ದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಚುರುಕುಗೊಂಡಿದೆ. ಕೆಲವರು “ಇದು ನಿಜ ಅಲ್ಲ, ಕೇವಲ ಸ್ಕಿಟ್‌” ಎಂದು ಅಭಿಪ್ರಾಯಪಟ್ಟರೆ, ಜೆಡ್ ತನ್ನ ಟಿಕ್‌ಟಾಕ್‌ ವೀಡಿಯೋದಲ್ಲಿ — “ನನ್ನ ತಾಯಿ ಮತ್ತು ನಾನು ಅದೇ ವ್ಯಕ್ತಿಯಿಂದ ಎರಡು ವಾರಗಳ ಅಂತರದಲ್ಲಿ ಮಗುವನ್ನು ಸ್ವಾಗತಿಸುತ್ತಿದ್ದೇವೆ” ಎಂದು ಹೇಳಿದ್ದು ಮತ್ತಷ್ಟು ವಿವಾದಕ್ಕೆ ಕಾರಣವಾಯಿತು.

“ಈ ಫ್ಯಾಮಿಲಿ ಟ್ರೀ ತಲೆನೋವು ಮಾಡುತ್ತಿದೆ” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದರೆ, ಇನ್ನೂ ಹಲವರು ಸಮಾಜದ ಮೇಲೆ ಉಂಟಾಗುವ ಪರಿಣಾಮಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.

ಅಂತರಾಷ್ಟ್ರೀಯ ಅಪರಾಧ