ಬೆಂಗಳೂರು, ಸೆ.16: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಯೂಸುಫ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಟಿವಿ ಲೈವ್ ಶೋನಲ್ಲಿ ಭಾರತದ ಕ್ರಿಕೆಟ್ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಅಸಭ್ಯವಾಗಿ ‘ಸುವ್ವರ್’ (ಹಂದಿ) ಎಂದು ಕರೆದಿದ್ದಾರೆ.

ಈ ಹೇಳಿಕೆ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಭಾರತ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಭಿಮಾನಿಗಳು ಯೂಸುಫ್ ವಿರುದ್ಧ ತೀವ್ರವಾಗಿ ಟೀಕೆ ವ್ಯಕ್ತಪಡಿಸುತ್ತಿದ್ದು, ಇದು ಕೇವಲ ಕ್ರೀಡಾ ಮನೋಭಾವಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.
ಅದರೊಂದಿಗೆ, ಯೂಸುಫ್ ಭಾರತ ತಂಡವು ಮೋಸದಿಂದ ಗೆದ್ದಿದೆ ಎಂದು ಆರೋಪಿಸಿ, ಮತ್ತಷ್ಟು ಕಿಡಿ ಹೊತ್ತಿಸಿದ್ದಾರೆ.
👉 ಸದ್ಯ, ಈ ಹೇಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿದ್ದು, ಪಾಕಿಸ್ತಾನ ಕ್ರಿಕೆಟ್ ವಲಯವೇ ಯೂಸುಫ್ ಅವರ ಹೇಳಿಕೆಯಿಂದ ಸಂಕೋಚಕ್ಕೆ ಒಳಗಾಗಿದೆ.

