ಅನಧಿಕೃತ ಬೆಟ್ಟಿಂಗ್ ಆಪ್‌ಗಳ ಜಾಹೀರಾತು ಪ್ರಕರಣ: ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಸೋನು ಸೂದ್‌ಗೆ ಇಡಿ ಸಮನ್ಸ್

ಅನಧಿಕೃತ ಬೆಟ್ಟಿಂಗ್ ಆಪ್‌ಗಳ ಜಾಹೀರಾತು ಪ್ರಕರಣ: ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಸೋನು ಸೂದ್‌ಗೆ ಇಡಿ ಸಮನ್ಸ್

ನವದೆಹಲಿ: ಕ್ರಿಕೆಟಿಗರಾದ ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ ಮತ್ತು ನಟ ಸೋನು ಸೂದ್ ಅವರಿಗೆ ಅನಧಿಕೃತ ಬೆಟ್ಟಿಂಗ್ ಆಪ್‌ಗಳ ಪ್ರಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED)ದಿಂದ ಸಮನ್ಸ್ ಜಾರಿಯಾಗಿದೆ.

1xBet ಸೇರಿದಂತೆ ಅನೇಕ ಆಪ್‌ಗಳು ಹಣಕಾಸು ಅಕ್ರಮ ಹಾಗೂ ತೆರಿಗೆ ವಂಚನೆ ಆರೋಪದಡಿ ತನಿಖೆಗೆ ಒಳಪಟ್ಟಿದ್ದು, ಇವುಗಳ ಪ್ರಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಈಗಾಗಲೇ ಶಿಖರ್ ಧವನ್, ಸುರೇಶ್ ರೈನಾ, ಉರ್ವಶಿ ರೌಟೇಲಾ ಹಾಗೂ ಹರ್ಭಜನ್ ಸಿಂಗ್‌ರನ್ನು ವಿಚಾರಣೆಗಾಗಿ ಕರೆಯಲಾಗಿದ್ದು, ಅವರು ಇಡೀ ಮುಂದೆ ಹಾಜರಾಗಿದ್ದಾರೆ.

ಮೆಟಾ ಮತ್ತು ಗೂಗಲ್ ಕೂಡಾ ಇಂತಹ ಆಪ್‌ಗಳಿಗೆ ಜಾಹೀರಾತು ನೀಡಲು ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ತನಿಖೆ ಎದುರಿಸುತ್ತಿವೆ.

ಪ್ರಸ್ತುತ ದೇಶದಲ್ಲಿ ಸುಮಾರು 22 ಕೋಟಿಯಷ್ಟು ಬಳಕೆದಾರರಿದ್ದು, ₹8.3 ಲಕ್ಷ ಕೋಟಿ ಮೌಲ್ಯದ ಆನ್‌ಲೈನ್ ಗೇಮಿಂಗ್ ಮಾರುಕಟ್ಟೆ ಇದೆ ಎನ್ನಲಾಗುತ್ತಿದೆ. ಇದರಿಂದ ಉಂಟಾಗುತ್ತಿರುವ ಆರ್ಥಿಕ ನಷ್ಟ, ವ್ಯಸನದ ಅಪಾಯ ಹಾಗೂ ವಂಚನೆ ಪ್ರಕರಣಗಳನ್ನು ತಡೆಯಲು ಸರ್ಕಾರ ಹೊಸ ನಿಯಂತ್ರಣ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ.

ಅಪರಾಧ ರಾಷ್ಟ್ರೀಯ