ರಿಷಿಕೇಶ, ಸೆಪ್ಟೆಂಬರ್ 15, 2025:
ಸ್ಯಾಂಡಲ್‌ವುಡ್ ನಟಿ ಕಾರುಣ್ಯಾ ರಾಮ್ ಅವರು ರಿಷಿಕೇಶದಲ್ಲಿ 117 ಮೀಟರ್ (383 ಅಡಿ) ಎತ್ತರದಿಂದ ಬಂಗೀ ಜಂಪ್ ಮಾಡುವ ಮೂಲಕ ತಮ್ಮ ಬಹುದಿನಗಳ ಕನಸನ್ನು ಈಡೇರಿಸಿದ್ದಾರೆ. ಈ ಸಾಹಸಿಕ ಕೃತ್ಯವನ್ನು ತಮ್ಮ ಆಪ್ತ ಗೆಳತಿಯ ಜೊತೆ ದೋ ಧಾಮ್ ಯಾತ್ರೆಯ ನಡುವೆ ನಡೆಸಿದ್ದು, ಅವರು ಈ ಮೂಲಕ ಭಯವನ್ನು ತೊರೆದು ಜೀವನದ ಸವಾಲುಗಳನ್ನು ಸ್ವೀಕರಿಸುವ ತಮ್ಮ ದೃಢತೆಯನ್ನು ಪ್ರತಿಪಾದಿಸಿದ್ದಾರೆ.


ಕಾರುಣ್ಯಾ ಜಂಪ್ ಮಾಡುವ ಮುನ್ನ “ಕಾಪಾಡಪ್ಪ ದೇವರೇ” ಎಂದು ಪ್ರಾರ್ಥಿಸಿದ್ದರು. ಅವರು ತಮ್ಮ ಸಾಹಸಿಕ ಅನುಭವವನ್ನು ಹಂಚಿಕೊಂಡು, “ಜೀವನದಲ್ಲಿ ಯಾರೂ ನನ್ನನ್ನು ಕೆಳಗಿಳಿಸಲು ಅಥವಾ ನನ್ನ ಅವಕಾಶಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾವುದೇ ಸವಾಲು ಮತ್ತು ಭಯವನ್ನು ಪೂರ್ಣ ಉತ್ಸಾಹದಿಂದ ಮತ್ತು ತಲೆ ಎತ್ತಿ ಎದುರಿಸಲು ನಾನು ಸಿದ್ಧಳಿದ್ದೇನೆ” ಎಂದಿದ್ದಾರೆ.

