ಗಾಜಾದಲ್ಲಿ ಪುರಾತನ ಅಬು ಸಲೀಂ ಮಸೀದಿಗೆ ಇಸ್ರೇಲ್ ಡ್ರೋನ್ ದಾಳಿ

ಗಾಜಾದಲ್ಲಿ ಪುರಾತನ ಅಬು ಸಲೀಂ ಮಸೀದಿಗೆ ಇಸ್ರೇಲ್ ಡ್ರೋನ್ ದಾಳಿ

ಗಾಜಾ: ಗಾಜಾದಲ್ಲಿ ನೆಲೆಸಿರುವ ಪುರಾತನ ಅಬು ಸಲೀಂ ಮಸೀದಿಯ ತಲೆ ಭಾಗವನ್ನು ಇಸ್ರೇಲ್ ಪಡೆಗಳು ಡ್ರೋನ್ ದಾಳಿಯಿಂದ ಉಡಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ಹಲವು ಶತಮಾನಗಳ ಇತಿಹಾಸ ಹೊಂದಿರುವ ಈ ಮಸೀದಿ ಸ್ಥಳೀಯರಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿತ್ತು.

ದಾಳಿಯಿಂದ ಮಸೀದಿಯ ತಲೆ ಭಾಗ ಸಂಪೂರ್ಣ ಹಾನಿಗೊಳಗಾಗಿದ್ದು, ಸ್ಥಳೀಯರಲ್ಲಿ ಭೀತಿ ಹಾಗೂ ಆಕ್ರೋಶ ಉಂಟಾಗಿದೆ. ಪವಿತ್ರ ಸ್ಮಾರಕಗಳ ಮೇಲಿನ ಈ ರೀತಿಯ ದಾಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆಗೆ ಕಾರಣವಾಗಬಹುದೆಂದು ವಲಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗಾಜಾದಲ್ಲಿನ ಮಾನವೀಯ ಸಂಕಟದ ನಡುವೆ ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿ, ಅಲ್ಲಿನ ಜನಜೀವನಕ್ಕೆ ಮತ್ತಷ್ಟು ಬಿಕ್ಕಟ್ಟು ತಂದಿದೆ.

ಅಂತರಾಷ್ಟ್ರೀಯ ಅಪರಾಧ