ಏಷ್ಯಾ ಕಪ್ 2025ರ ಟಿ20 ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ

ಏಷ್ಯಾ ಕಪ್ 2025ರ ಟಿ20 ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ

ಏಷ್ಯಾ ಕಪ್ 2025ರ ಟಿ20 ಪಂದ್ಯದಲ್ಲಿ ಭಾರತವು ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಭಾರತದ ಬೌಲರ್‌ಗಳ ಪ್ರಭಾವಿ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ ಕೇವಲ 127 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತು.

ಸಹಿಬ್ಜಾದ ಫರ್ಹಾನ್ (40) ಮತ್ತು ಶಾಹೀನ್ ಅಫ್ರಿದಿ (33) ಮಾತ್ರ ಪ್ರತಿರೋಧ ತೋರಿದರೆ, ಉಳಿದ ಬ್ಯಾಟ್ಸ್‌ಮನ್‌ಗಳು ನಿರಾಶೆ ಮೂಡಿಸಿದರು. ಭಾರತ ಪರ ಕುಲದೀಪ್ ಯಾದವ್ 3 ವಿಕೆಟ್ ಕಿತ್ತರೆ, ಜಸ್ಪ್ರೀತ್ ಬೂಮ್ರಾ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್ ಪಡೆದರು.

ಗುರಿಯಾದ 128 ರನ್‌ಗಳನ್ನು ಬೆನ್ನಟ್ಟಿದ ಭಾರತವು ಕೇವಲ 15.5 ಓವರ್‌ಗಳಲ್ಲಿ 131 ರನ್‌ಗಳನ್ನು ಕಲೆಹಾಕಿ ಸುಲಭ ಜಯ ಗಳಿಸಿತು. ಆರಂಭದಲ್ಲಿ ಶುಭ್ಮನ್ ಗಿಲ್ (10) ಮತ್ತು ಅಭಿಷೇಕ್ ಶರ್ಮಾ (31) ಬೇಗನೆ ಔಟ್ ಆದರೂ, ನಾಯಕ ಸೂರ್ಯಕುಮಾರ್ ಯಾದವ್ (47) ಹಾಗೂ ತಿಲಕ್ ವರ್ಮಾ (31) ಉತ್ತಮ ಆಟ ತೋರಿದರು. ಕೊನೆಯಲ್ಲಿ ಶಿವಂ ದುಬೆ (10*) ಜೊತೆಯಾದ ಸೂರ್ಯಕುಮಾರ್ ತಂಡವನ್ನು ಜಯದ ದಡಕ್ಕೆ ಒಯ್ದರು.

ಅಂತರಾಷ್ಟ್ರೀಯ ಕ್ರೀಡೆ