ಆಪರೇಷನ್‌ ಸಿಂಧೂರ ನಂತರ ಭಾರತ–ಪಾಕಿಸ್ತಾನ ಕ್ರಿಕೆಟ್‌ ಪಂದ್ಯ ಬಹಿಷ್ಕಾರಕ್ಕೆ ದೇಶವ್ಯಾಪಿ ಕರೆ

ಆಪರೇಷನ್‌ ಸಿಂಧೂರ ನಂತರ ಭಾರತ–ಪಾಕಿಸ್ತಾನ ಕ್ರಿಕೆಟ್‌ ಪಂದ್ಯ ಬಹಿಷ್ಕಾರಕ್ಕೆ ದೇಶವ್ಯಾಪಿ ಕರೆ

ಪಹಲ್ಗಾಂ ದಾಳಿ ಹಾಗೂ ಆಪರೇಷನ್‌ ಸಿಂಧೂರಿನ ನಂತರ ಭಾರತ–ಪಾಕಿಸ್ತಾನ ಏಷ್ಯಾ ಕಪ್‌ ಪಂದ್ಯ ಆಡುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ದೇಶದಾದ್ಯಂತ ಪಂದ್ಯ ಬಹಿಷ್ಕಾರದ ಕರೆಗಳು ಜೋರಾಗಿವೆ.

ಸೈನಿಕರು, ರಾಜಕೀಯ ನಾಯಕರು, ಚಲನಚಿತ್ರ ತಾರೆಯರು ಹಾಗೂ ಸಾಮಾನ್ಯ ನಾಗರಿಕರು ಸೇರಿದಂತೆ ಅನೇಕರ ಧ್ವನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿ, ಭಾರತ–ಪಾಕಿಸ್ತಾನ ಹೈ ವೋಲ್ಟೇಜ್‌ ಪಂದ್ಯವನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂದು ಒತ್ತಾಯಿಸುತ್ತಿವೆ.

“ಪಹಲ್ಗಾಂ ದಾಳಿಯಲ್ಲಿ 26 ಜನರು ಬಲಿಯಾದ ಘಟನೆ ಮತ್ತು ನಾಲ್ಕು ದಿನಗಳ ಯುದ್ಧದ ನೆನಪಿನಲ್ಲಿ, ಈ ಬಾರಿ ಪಾಕಿಸ್ತಾನ ವಿರುದ್ಧ ಭಾರತ ಆಡುವುದು ಅನೇಕರಲ್ಲಿ ಆಕ್ರೋಶ ಹುಟ್ಟಿಸಿದೆ.”

ಅಂತರಾಷ್ಟ್ರೀಯ ಕ್ರೀಡೆ