ಮುಂಬೈ ಏರ್‌ಪೋರ್ಟ್‌ನಲ್ಲಿ ಆತಂಕ – ಟೇಕ್‌ಆಫ್ ಬಳಿಕ ಚಕ್ರ ಬಿದ್ದರೂ ಸುರಕ್ಷಿತ ಲ್ಯಾಂಡಿಂಗ್ ಮಾಡಿದ ಸ್ಪೈಸ್‌ಜೆಟ್ ವಿಮಾನ

ಮುಂಬೈ ಏರ್‌ಪೋರ್ಟ್‌ನಲ್ಲಿ ಆತಂಕ – ಟೇಕ್‌ಆಫ್ ಬಳಿಕ ಚಕ್ರ ಬಿದ್ದರೂ ಸುರಕ್ಷಿತ ಲ್ಯಾಂಡಿಂಗ್ ಮಾಡಿದ ಸ್ಪೈಸ್‌ಜೆಟ್ ವಿಮಾನ

ಮುಂಬೈ, ಸೆ.12: ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಚಕ್ರ ಬಿದ್ದ ಘಟನೆ ಮುಂಬೈ ಏರ್‌ಪೋರ್ಟ್‌ನಲ್ಲಿ ತುರ್ತು ಪರಿಸ್ಥಿತಿಗೆ ಕಾರಣವಾಯಿತು. ಕಾಂಡ್ಲಾದಿಂದ ಮುಂಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನದ ಚಕ್ರಗಳು ರನ್‌ವೇಯಲ್ಲಿ ಪತ್ತೆಯಾಗಿದ್ದರಿಂದ ಮುಂಬೈ ಏರ್‌ಪೋರ್ಟ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು.

ಅಧಿಕಾರಿಗಳು ತಕ್ಷಣವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಂಜೆ 5 ಗಂಟೆಯವರೆಗೆ ಸಂಪೂರ್ಣ ಅಲರ್ಟ್ ಜಾರಿಗೊಳಿಸಿದರು. ಆತಂಕದ ನಡುವೆಯೂ ಪೈಲಟ್‌ಗಳು ವಿಮಾನವನ್ನು ಯಶಸ್ವಿಯಾಗಿ ನಿಯಂತ್ರಿಸಿ, ಮುಂಬೈ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಅನಾಹುತ ಸಂಭವಿಸದೇ ವಿಮಾನ ಸುರಕ್ಷಿತವಾಗಿ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ