ಬೆಂಗಳೂರು: ‘ಸ್ಯಾಂಡಲ್‌ವುಡ್ ಕ್ವೀನ್’ ಎಂದೇ ಪರಿಚಿತರಾದ ನಟಿ ರಮ್ಯಾ ಹಾಗೂ ನಟ ವಿನಯ್ ರಾಜ್‌ಕುಮಾರ್ ಬಗ್ಗೆ ಇತ್ತೀಚೆಗೆ ಹಲವು ವದಂತಿಗಳು ಹರಿದಾಡುತ್ತಿವೆ. ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ, ಮದುವೆಯಾಗುತ್ತಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಡಿದವು.

ಸದ್ಯ ಅಮೆರಿಕ ಪ್ರವಾಸದಲ್ಲಿರುವ ರಮ್ಯಾ, ತಮ್ಮ ಸ್ನೇಹಿತರಾದ ವಿನಯ್ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಪುತ್ರಿ ವಂದಿತಾ ಜೊತೆಗಿನ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ ನಂತರ ಈ ಊಹಾಪೋಹಗಳು ಇನ್ನಷ್ಟು ಹೆಚ್ಚಾಗಿದ್ದವು.
ಇದಕ್ಕೆ ಸ್ಪಷ್ಟನೆ ನೀಡಿದ ರಮ್ಯಾ, “ನಾನು ಮದುವೆಯಾಗ್ತಿದ್ರೆ, ಅದನ್ನು ನಾನೇ ಹೇಳ್ತಿನಿ. ವಿನಯ್ ನನ್ನ ತಮ್ಮನಿದ್ದಂತೆ. ನಿಮ್ಮ ಕಲ್ಪನೆಗೂ ಒಂದು ಮಿತಿ ಇರಲಿ” ಎಂದು ಹೇಳಿ, ಎಲ್ಲ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.
ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆ ಜನರು ಸುಲಭವಾಗಿ ಊಹೆ ಮಾಡುವುದು, ಜಡ್ಜ್ ಮಾಡುವುದು ಬೇಡ ಎಂದು ರಮ್ಯಾ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

