ದೆಹಲಿ: ಅಚ್ಚರಿಯ ಘಟನೆ ದೆಹಲಿಯಲ್ಲಿ ನಡೆದಿದೆ. ಹೊಸದಾಗಿ ಖರೀದಿಸಿದ ಮಹೀಂದ್ರ ಥಾರ್ ಕಾರು, ಶೋರೂಮ್‌ನ ಮೊದಲ ಮಹಡಿಯಿಂದ ನೇರವಾಗಿ ಕೆಳಗೆ ಬಿದ್ದು ಭಾರಿ ಆತಂಕ ಮೂಡಿಸಿದೆ.

29 ವರ್ಷದ ಮಾನಿ ಪವಾರ್ ಎಂಬ ಮಹಿಳೆ, ತನ್ನ ಹೊಸ SUV ವಾಹನವನ್ನು ಖರೀದಿಸಿ ಚಾಲನೆ ಮಾಡುವ ಮೊದಲು ಸಂಪ್ರದಾಯವಾಗಿ ನಡೆಯುವ ನಿಂಬೆ ಹಣ್ಣಿನ ಮೇಲೆ ಕಾರ್ ಹತ್ತಿಸಲು ಯತ್ನಿಸಿದರು. ಆದರೆ ನಿಧಾನವಾಗಿ ಚಲಾಯಿಸಬೇಕಾದಾಗ, ತಪ್ಪಾಗಿ ಆಕ್ಸಿಲೆರೇಟರ್ ಒತ್ತಿದ ಪರಿಣಾಮ, ಕಾರು ಶೋರೂಮ್‌ನ ಗಾಜಿನ ಗೋಡೆಯನ್ನು ಒಡೆದು ಕೆಳ ರಸ್ತೆಗೆ ಬಿದ್ದಿತು.
ಘಟನೆಯ ಸಮಯದಲ್ಲಿ ಕಾರಿನಲ್ಲಿದ್ದ ಮಾನಿ ಪವಾರ್ ಮತ್ತು ಶೋರೂಮ್‌ನ ಒಬ್ಬ ಉದ್ಯೋಗಿ ಏರ್‌ಬ್ಯಾಗ್‌ನಿಂದ ಪಾರಾಗಿದ್ದು, ಸಣ್ಣ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.
ಪೊಲೀಸರು ಯಾವುದೇ ಸಾವುನೋವು ಅಥವಾ ಗಂಭೀರ ಗಾಯಗಳಿಲ್ಲವೆಂದು ದೃಢಪಡಿಸಿದ್ದಾರೆ. ಈ ಅಪರೂಪದ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

