ಅತ್ತೆ ಜೊತೆ ಜಗಳ ಮಾಡಿ ಮನೆ ಬಿಟ್ಟು ಹೋದ ಪ್ರಜ್ವಲ್‌ ದೇವರಾಜ್‌ ಪತ್ನಿ ಸೋಶಿಯಲ್‌ ಮೀಡಿಯಾ ಟ್ರೋಲ್‌

ಅತ್ತೆ ಜೊತೆ ಜಗಳ ಮಾಡಿ ಮನೆ ಬಿಟ್ಟು ಹೋದ ಪ್ರಜ್ವಲ್‌ ದೇವರಾಜ್‌ ಪತ್ನಿ ಸೋಶಿಯಲ್‌ ಮೀಡಿಯಾ ಟ್ರೋಲ್‌

ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳ ಅಟ್ಟಹಾಸ ಯಾರನ್ನೂ ಬಿಡುವುದಿಲ್ಲ. ವಿಶೇಷವಾಗಿ ಸಿನಿತಾರೆಯರ ವೈಯಕ್ತಿಕ ಬದುಕು ಅದರ ಗುರಿಯಾಗುತ್ತದೆ. ಇತ್ತೀಚೆಗೆ ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ, ನಟಿ ಮತ್ತು ಫಿಟ್ನೆಸ್ ಟ್ರೈನರ್ ರಾಗಿಣಿ ಪ್ರಜ್ವಲ್ ಕೂಡ ಇಂತಹ ಅಸಂಬದ್ಧ ಟ್ರೋಲ್‌ಗೆ ಸಿಲುಕಿದ್ದಾರೆ.

ಹರಿದಾಡಿದ ಸುದ್ದಿ ಏನೆಂದರೆ – “ರಾಗಿಣಿ ತಮ್ಮ ಅತ್ತೆಯೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದಾರೆ” ಎಂಬ ಟ್ರೋಲ್. ಈ ಬಗ್ಗೆ ಪ್ರತಿಕ್ರಿಯಿಸಿದ ರಾಗಿಣಿ, “ನಾನು ಅತ್ತೆ ಜೊತೆ ಜಗಳ ಮಾಡಿ ಮನೆ ಬಿಟ್ಟೆ ಅಂತಾ ಸುದ್ದಿ ಬಂತು! ಇದರಿಂದ ನಮ್ಮ ಅತ್ತೆಯವರ ಸಹೋದರಿಯರು, ಕುಟುಂಬದವರು ಎಲ್ಲರೂ ಕಾಲ್ ಮಾಡಿ ಏನಾಯ್ತು ಅಂತಾ ಕೇಳಿದರು. ವಾಸ್ತವದಲ್ಲಿ ನಾನು ಒಂದು ಪ್ರಾಪರ್ಟಿಗೆ ಆಡ್ ಮಾಡಿದ್ದೆ. ಅದನ್ನೇ ಜನರು ಬೇರೆ ಮನೆ ಮಾಡಿಕೊಂಡು ಬಿಟ್ಟಿದ್ದಾರೆ ಎಂದು ತಪ್ಪಾಗಿ ಊಹಿಸಿದ್ದರು. ಫುಲ್ ಕಾಮೆಂಟ್ಸ್ ಬಂದವು, ಇದು ನನಗೆ ತುಂಬಾ ಫನ್ನಿ ಅನ್ನಿಸಿತು” ಎಂದಿದ್ದಾರೆ.

ರಾಗಿಣಿ ಈ ಹಿಂದೆ ಬಂದ ಟ್ರೋಲ್‌ಗಳನ್ನೂ ಹಾಸ್ಯದಲ್ಲಿ ತೆಗೆದುಕೊಂಡಿದ್ದರು. ಈಗಲೂ ಅದೇ ರೀತಿಯಲ್ಲಿ ಸ್ಪಂದಿಸಿ, “ವೈಯಕ್ತಿಕ ಜೀವನದ ಸುಳ್ಳು ಸುದ್ದಿಗಳು ನನಗೆ ಹೆಚ್ಚಿನ ಕಿರಿಕಿರಿಯನ್ನು ಉಂಟುಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಅಪರಾಧ ಮನೋರಂಜನೆ