ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಮುಂದುವರಿಯುತ್ತಿರುವ ನಡುವೆ, ಕೇರಳದ ಯೂಟ್ಯೂಬರ್ ಅಬ್ದುಲ್ ಮನಾಫ್ ಇಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾಗುತ್ತಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ವಿಚಾರಣೆ ನಡೆಸಿರುವ ಎಸ್‌ಐಟಿ, ಅಬ್ದುಲ್ ಮನಾಫ್ ಅವರನ್ನು ಸೆಪ್ಟೆಂಬರ್ 5ರಂದು ಹಾಜರಾಗಲು ನೋಟಿಸ್ ನೀಡಿತ್ತು. ಆದರೆ ಹಬ್ಬದ ಕಾರಣವನ್ನು ತಿಳಿಸಿ ಅವರು ಕೆಲವು ದಿನಗಳ ಸಮಯವನ್ನು ಕೋರಿ ಮನವಿ ಸಲ್ಲಿಸಿದ್ದರು. ಅದರಂತೆ, ಇಂದು ಅವರು ವಿಚಾರಣೆಗೆ ಹಾಜರಾಗುತ್ತಿದ್ದಾರೆ.
ಇದರ ಜೊತೆಗೆ, ನಿನ್ನೆ ಅಬ್ದುಲ್ ಮನಾಫ್ ಕೇರಳದ ಎಸ್‌ಪಿ ಕಚೇರಿಗೆ ಭೇಟಿ ನೀಡಿ, ತನಿಖೆಗೆ ಹಾಜರಾಗುವ ವೇಳೆ ತಮ್ಮ ಸುರಕ್ಷತೆಗೆ ಪೊಲೀಸ್ ರಕ್ಷಣೆಯನ್ನು ಒದಗಿಸುವಂತೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿದ್ದು, ಇಂದು ಅವರು ಕೇರಳ ಪೊಲೀಸ್ ಪ್ರೊಟೆಕ್ಷನ್‌ನೊಂದಿಗೆ ಎಸ್‌ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ.

