ಪಂಜಾಬ್‌ನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಮನಗಂಡು, ದೆಹಲಿ ಸರ್ಕಾರವು ಪಂಜಾಬ್ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹5 ಕೋಟಿ ನೆರವು ಘೋಷಿಸಿದೆ.ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಪ್ರತಿಕ್ರಿಯಿಸಿ, “ಈ ಕಷ್ಟದ ಸಂದರ್ಭಗಳಲ್ಲಿ ದೆಹಲಿ ಸರ್ಕಾರ ಹಾಗೂ ದೆಹಲಿ ಜನತೆ ಪಂಜಾಬ್‌ನ ಜನರ ಜೊತೆಯಲ್ಲಿದ್ದಾರೆ. ಪ್ರವಾಹದಿಂದ ಬಾಧಿತರಾದವರಿಗೆ ಎಲ್ಲ ರೀತಿಯ ಸಹಾಯ ನೀಡಲು ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ.


