ಮಗಳ ಶಿಕ್ಷಣವೇ ರಾಷ್ಟ್ರದ ಪ್ರಗತಿಗೆ ಅತ್ಯುತ್ತಮ ಹೂಡಿಕೆ: ರಾಷ್ಟ್ರಪತಿ ಮರ್ಮು

ಮಗಳ ಶಿಕ್ಷಣವೇ ರಾಷ್ಟ್ರದ ಪ್ರಗತಿಗೆ ಅತ್ಯುತ್ತಮ ಹೂಡಿಕೆ: ರಾಷ್ಟ್ರಪತಿ ಮರ್ಮು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮರ್ಮು ಅವರು “ಮಗಳಿಗೆ ಉತ್ತಮ ಶಿಕ್ಷಣ ನೀಡುವುದು ಮಹಿಳಾ ನೇತೃತ್ವದ ಅಭಿವೃದ್ಧಿಗೆ ಅತ್ಯಂತ ಪರಿಣಾಮಕಾರಿ ಮಾರ್ಗ” ಎಂದು ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ–2025 ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಗಳ ಶಿಕ್ಷಣಕ್ಕೆ ಅತಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದರು.

ಮಗಳ ಶಿಕ್ಷಣದಲ್ಲಿ ಮಾಡಿದ ಹೂಡಿಕೆ, ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಪ್ರಗತಿಗೆ ಅಮೂಲ್ಯ ಕೊಡುಗೆ ಎಂದು ಅವರು ಅಭಿಪ್ರಾಯಪಟ್ಟರು. ಇತ್ತೀಚಿನ ವರ್ಷಗಳಲ್ಲಿ ಹೆಣ್ಣುಮಕ್ಕಳ ಉನ್ನತ ಶಿಕ್ಷಣದ ಒಟ್ಟು ಪ್ರವೇಶ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿರುವುದು ಸಂತೋಷಕರ ಬೆಳವಣಿಗೆ ಎಂದರು.

ಅವರು ಮುಂದುವರಿದು, ಶಿಕ್ಷಣವು ವ್ಯಕ್ತಿಯ ಶಕ್ತೀಕರಣಕ್ಕೆ ಕಾರಣವಾಗುತ್ತದೆ. ಆಹಾರ, ಬಟ್ಟೆ ಮತ್ತು ವಾಸಸ್ಥಾನದಂತೆಯೇ ಶಿಕ್ಷಣವೂ ಮಾನವೀಯ ಗೌರವ ಹಾಗೂ ಭದ್ರತೆಗೆ ಅಗತ್ಯವೆಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿ 2020 ಶಾಲಾ ಮಟ್ಟದಲ್ಲೇ ಶಿಕ್ಷಣವನ್ನು ಸುಲಭವಾಗಿ ಹಾಗೂ ನಿರ್ವಿಘ್ನವಾಗಿ ಮಾಡುವತ್ತ ವಿಶೇಷ ಒತ್ತು ನೀಡುತ್ತದೆ ಎಂದು ರಾಷ್ಟ್ರಪತಿ ಮರ್ಮು ಹೈಲೈಟ್ ಮಾಡಿದರು

ರಾಷ್ಟ್ರೀಯ