ದನ ಕದ್ದವರ ಕೈ ಕಡಿಯಬೇಕು – ಅಶೋಕ್ ಕುಮಾರ್ ರೈ

ದನ ಕದ್ದವರ ಕೈ ಕಡಿಯಬೇಕು – ಅಶೋಕ್ ಕುಮಾರ್ ರೈ

ಪುತ್ತೂರು: ಪೆರ್ನೆಯಲ್ಲಿ ನಡೆದ ದನ ಕದ್ದು ಕೊಂದ ಪ್ರಕರಣದ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಪೀಡಿತ ಕೃಷಿಕರ ಮನೆಗೆ ಭೇಟಿ ನೀಡಿದರು.

ಈ ವೇಳೆ ಅವರು, “ಹಟ್ಟಿಯಿಂದ ಕದ್ದೊಯ್ದ ದನವನ್ನು ಕೊಂದ ಆರೋಪಿಗಳು ಯಾರೇ ಆಗಿದ್ದರೂ ಅವರ ಕೈ ಕಡಿಯಬೇಕು” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೇ, ಹಸು ಕಳೆದುಕೊಂಡ ಕುಟುಂಬಕ್ಕೆ ಶೀಘ್ರದಲ್ಲೇ ಹೊಸ ಹಸು ಒದಗಿಸುವ ಭರವಸೆ ನೀಡಿದರು.

ಅಪರಾಧ ರಾಜ್ಯ