ಬಿಹಾರದಲ್ಲಿ ರಾಯಲ್  ಭೂತಾನ್ ಬೌದ್ಧ  ದೇವಸ್ಥಾನದ ಉದ್ಘಾಟನೆ

ಬಿಹಾರದಲ್ಲಿ ರಾಯಲ್  ಭೂತಾನ್ ಬೌದ್ಧ ದೇವಸ್ಥಾನದ ಉದ್ಘಾಟನೆ

ಬಿಹಾರ ರಾಜ್ಯದ ರಾಜಗಿರಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ರಾಯಲ್ ಭೂತಾನ್ ಬೌದ್ಧ ದೇವಸ್ಥಾನವನ್ನು ಇಂದು ಭೂಟಾನ್ ಪ್ರಧಾನಮಂತ್ರಿ ಷೆರಿಂಗ್ ಟೊಬ್ಗೇ ಹಾಗೂ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರೇನ್ ರಿಜಿಜು ಅವರ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು. ಭೂಟಾನೀಸ್ ಸಂಪ್ರದಾಯದಂತೆ ಬೌದ್ಧ ಧಾರ್ಮಿಕ ವಿಧಿ–ವಿಧಾನಗಳ ಮೂಲಕ ದೇವಸ್ಥಾನದ ಉದ್ಘಾಟನೆ ನೆರವೇರಿತು.

ರಾಜಗಿರಿ ಬೌದ್ಧ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿರುವ ಸ್ಥಳವಾಗಿದ್ದು, ಶ್ರೀ ಬುದ್ಧ ದೇವರ ತಪಸ್ಸಿನ ನೆಲವೆಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ಭೂತಾನ್  ಪ್ರಧಾನಮಂತ್ರಿ ಷೆರಿಂಗ್ ಟೊಬ್ಗೇ ಮಾತನಾಡಿ, ಈ ಬೌದ್ಧ ದೇವಸ್ಥಾನವು ಭಾರತ ಮತ್ತು ಭೂಟಾನ್ ನಡುವಿನ ಸ್ನೇಹ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಅಂತರಾಷ್ಟ್ರೀಯ ಧಾರ್ಮಿಕ