ಧರ್ಮಸ್ಥಳ ಸೌಜನ್ಯ ತಾಯಿ ಕುಸುಮಾವತಿ ಮನೆ ಇಡಿ ರೈಡ್ ಮಾಡಬೇಕು – ಉದಯ್ ಜೈನ್

ಧರ್ಮಸ್ಥಳ ಸೌಜನ್ಯ ತಾಯಿ ಕುಸುಮಾವತಿ ಮನೆ ಇಡಿ ರೈಡ್ ಮಾಡಬೇಕು – ಉದಯ್ ಜೈನ್

ಧರ್ಮಸ್ಥಳ ಪ್ರಕರಣ ಒಂದೊಂದು ದಿನ ಒಂದೊಂದು ವಿಷಯಕ್ಕೆ ಸುದ್ದಿಯಲ್ಲಿದೆ. ಇವತ್ತು ಎಸ್ ಐ ಟಿ ವಿಚಾರಣೆಗೆ ಆಗಮಿಸಿದ ಸೌಜನ್ಯ ಹತ್ಯೆ ಪ್ರಕರಣದಲ್ಲಿ ಕುಟುಂಬದವರಿಂದ ಆರೋಪಿತ ವ್ಯಕ್ತಿಗಳಲ್ಲಿ ಒಬ್ಬರಾದ ಉದಯ್ ಜೈನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಷಯದ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸೌಜನ್ಯ ಪ್ರಕರಣದಲ್ಲಿ ನಮ್ಮನ್ನು ಸುಮ್ಮನೆ ಸಿಲುಕಿಸಿ ನಮ್ಮನ್ನು ಬೀದಿಗೆ ತಂದ ಸೌಜನ್ಯ ತಾಯಿ ಕುಸುಮಾವತಿ ಅವರು ಮೂರು ಮಹಡಿ ಮನೆ ಕಟ್ಟಿ ಕೂತಿದ್ದಾರೆ. ವಿನಾಕಾರಣ ಈ ಪ್ರಕಣದಲ್ಲಿ ಒಂದು ವರ್ಷದ ಬಳಿಕ ನಮ್ಮನ್ನು ಸೇರಿಸಲಾಗಿದೆ.

ಆದ್ದರಿಂದ ಸೌಜನ್ಯ ತಾಯಿ ಕುಸುಮಾವತಿ ಮನೆ ಮೇಲೆ ಇಡಿ ದಾಳಿ ಮಾಡಬೇಕು ಎಂದು ಅವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಈಗಲೇ ನಾವು ಎಲ್ಲಾ ತನಿಖೆಯನ್ನು ಎದುರಿಸಿದ್ದೇವೆ ಬ್ರೈನ್ ಮ್ಯಾಪ್ ಕೂಡ ನಡೆಸಲಾಗಿದೆ.

ಬೆಂಗಳೂರು ಸೇರಿದಂತೆ ಚೆನ್ನೈ ನಲ್ಲಿ ಕೂಡ ನಮ್ಮನ್ನು ತನಿಖೆಗೆ ಒಳಪಡಿಸಿದ್ದಾರೆ. ಆದ್ದರಿಂದ ನಮಗೆ ಯಾವುದೇ ಭಯವಿಲ್ಲ ನಾವು ನಿರಪರಾಧಿಗಳು ಎಂದು ಅವರು ಹೇಳಿದ್ದಾರೆ.

ಅಪರಾಧ ರಾಜ್ಯ