ಧರ್ಮಸ್ಥಳ ಬುರುಡೆ ಪ್ರಕರಣ ಚಿನ್ನ ಮತ್ತೆ 3 ದಿನ ಎಸ್ ಐ ಟಿ ಕಸ್ಟಡಿಗೆ

ಧರ್ಮಸ್ಥಳ ಬುರುಡೆ ಪ್ರಕರಣ ಚಿನ್ನ ಮತ್ತೆ 3 ದಿನ ಎಸ್ ಐ ಟಿ ಕಸ್ಟಡಿಗೆ

ಧರ್ಮಸ್ಥಳ ಬುರುಡೆ ಪ್ರಕರಣ ಸಂಭಂದಿಸಿದಂತೆ ಮೊದಲು ಸಾಕ್ಷಿದಾರನಾಗಿ ಬಂದಿದ್ದ ಚಿನ್ನ ನಂತರ ಎಸ್ ಐ ಟಿ ವಿಚಾರಣೆಗೆ ತನ್ನ ವಶಕ್ಕೆ 10 ದಿನಗಳ ಕಾಲ ಪಡೆದಿತ್ತು. 10 ದಿನ ಇಂದಿಗೆ ಮುಕ್ತಾಯವಾದ ಹಿನ್ನಲೆಯಲ್ಲಿ ಎಸ್ ಐ ಟಿ ಚಿನ್ನನನ್ನು ಮತ್ತೆ ಇಂದು ಕೋರ್ಟ್ ಗೆ ಹಾಜರು ಪಡಿಸಿ ಮೂರು ದಿನಗಳ ಕಸ್ಟಡಿ ನೀಡುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿತ್ತು.

ಅದರಂತೆ ಪುನಃ 3 ದಿನ ಎಸ್ ಐ ಟಿ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಈ ನಡುವೆ ಎಫ್ ಎಸ್ ಎಲ್ ವರದಿ ಕೂಡ ಇನ್ನೂ ಎಸ್ ಐ ಟಿ ಗೆ ಲಭ್ಯವಾಗಿಲ್ಲ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

ಅಪರಾಧ ರಾಜ್ಯ