ರಿಲಯನ್ಸ್ ಜಿಯೋ ತನ್ನ ಮಹತ್ವದ ಮೈಲಿಗಲ್ಲನ್ನು ತಲುಪಿದ್ದು, ದೇಶದ ಅತಿ ದೊಡ್ಡ ಡಿಜಿಟಲ್ ಕ್ರಾಂತಿಯೆಂದು ಘೋಷಿಸಿದೆ. ಜಿಯೋ ಈಗ 500 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಇದು ಭಾರತದ ಡಿಜಿಟಲ್ ಕ್ರಾಂತಿಯ ಹೊಸ ಅಧ್ಯಾಯವಾಗಿದೆ.

ಕಂಪನಿಯು ಈ ಸಾಧನೆಗೆ ಕಾರಣರಾದ ಪ್ರತಿಯೊಬ್ಬ ಭಾರತೀಯರಿಗೆ ಧನ್ಯವಾದಗಳನ್ನು ಸಲ್ಲಿಸಿದೆ. “ಒಂದು ಬಿಲಿಯನ್ ಕನಸುಗಳು, 500 ಮಿಲಿಯನ್ ಹೃದಯಗಳು, ಒಂದು ಶಕ್ತಿಯುತ ಚಳವಳಿ” ಎಂದು ಈ ಈ ಮೈಲಿಗಲ್ಲನ್ನು ವರ್ಣಿಸಿದೆ. ಡಿಜಿಟಲ್ ಇಂಡಿಯಾ ಅಭಿಯಾನವನ್ನು ಇನ್ನಷ್ಟು ಬಲಪಡಿಸಿರುವುದಾಗಿ ಜಿಯೋ ತಿಳಿಸಿದೆ.
ಡಿಜಿಟಲ್ ತಂತ್ರಜ್ಞಾನ, ಶಿಕ್ಷಣ, ನವೀನತೆ ಮತ್ತು ಸಂಪರ್ಕವನ್ನು ದೇಶದ ಮೂಲೆಮೂಲೆಗಳಿಗೆ ತಲುಪಿಸುವಲ್ಲಿ ಜಿಯೋ ಮಹತ್ವದ ಪಾತ್ರ ವಹಿಸಿದೆ. “ಇದು ಕೇವಲ ಪ್ರಾರಂಭ ಮಾತ್ರ, ಇನ್ನೂ ದೊಡ್ಡ ಪ್ರಯಾಣದ ಆರಂಭ” ಎಂದು ಕಂಪನಿಯು ಘೋಷಿಸಿದೆ.

