ಪಕ್ಷ ಸಮಾವೇಶದಲ್ಲಿ ಹಲ್ಲೆ ಪ್ರಕರಣ: ನಟ ವಿಜಯ್ ಸೇರಿದಂತೆ ಬೌನ್ಸರ್‌ಗಳ ವಿರುದ್ಧ ಪ್ರಕರಣ

ಪಕ್ಷ ಸಮಾವೇಶದಲ್ಲಿ ಹಲ್ಲೆ ಪ್ರಕರಣ: ನಟ ವಿಜಯ್ ಸೇರಿದಂತೆ ಬೌನ್ಸರ್‌ಗಳ ವಿರುದ್ಧ ಪ್ರಕರಣ

ನಟ ಹಾಗೂ ತಮಿಳಕ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ವಿಜಯ್ ವಿರುದ್ಧ ಪ್ರಕರಣ ದಾಖಲಾಗಿದೆ. ಪಕ್ಷದ ರಾಜ್ಯ ಸಮಾವೇಶದಲ್ಲಿ ಯುವಕನ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಈ ದೂರು ದಾಖಲಿಸಲಾಗಿದೆ.

ಪೆರಂಬಲೂರು ಮೂಲದ ಶರತ್ ಕುಮಾರ್ ಎಂಬ ಯುವಕ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ದೂರಿನಲ್ಲಿ, ಆಗಸ್ಟ್ 21ರಂದು ಮಧುರೈನಲ್ಲಿ ನಡೆದ TVK ಪಕ್ಷದ ರಾಜ್ಯ ಸಮಾವೇಶದಲ್ಲಿ ಭಾಗಿಯಾಗಿದ್ದ ವೇಳೆ ವಿಜಯ್ ಜೊತೆಗಿದ್ದ ಬೌನ್ಸರ್‌ಗಳು ತಮಗೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಧುರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅಪರಾಧ ಮನೋರಂಜನೆ ರಾಷ್ಟ್ರೀಯ