ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಹತ್ಯೆ ಪ್ರಕರಣದ ತನಿಖೆಯ ವೇಳೆ ಮಹತ್ವದ ಬೆಳವಣಿಗೆ ನಡೆದಿದೆ. SIT (ವಿಶೇಷ ತನಿಖಾ ದಳ) ಚಿನ್ನಯ್ಯ ಎಂಬಾತನನ್ನು ಬಂಧಿಸಿದ್ದು, ಸೌಜನ್ಯ ದೇಹ ವಿಲೇವಾರಿ ಮಾಡಿದ್ದು– ಮಾಸ್ಕ್ ಮ್ಯಾನ್ ಚಿನ್ನಯ್ಯ ಎಂಬ ಶಂಕೆ ಎಂದು BLR POST ಡಿಜಿಟಲ್ ಪ್ಲಾಟ್‌ಫಾರ್ಮ್ ವರದಿ ಮಾಡಿದೆ.

ಮಾಹಿತಿ ಪ್ರಕಾರ, SIT ವಿಚಾರಣೆ ವೇಳೆ ಚಿನ್ನಯ್ಯ ಆರಂಭದಲ್ಲಿ “ನಾನು ರಜೆ ಮೇಲೆ ಇದ್ದೆ” ಎಂದು ಹೇಳಿದರೂ, ನಂತರ ಧರ್ಮಸ್ಥಳದಿಂದ ಕರೆ ಬಂದಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು BLR POST ಡಿಜಿಟಲ್ ಪ್ಲಾಟ್‌ಫಾರ್ಮ್ ವರದಿ ಮಾಡಿದೆ.
ಗಮನಿಸಬೇಕಾದ ವಿಷಯವೆಂದರೆ, ಈ ಪ್ರಕರಣವನ್ನು CID ಹಾಗೂ ನಂತರ CBI ತನಿಖೆ ನಡೆಸಿದ್ದರೂ, ಸ್ಥಳೀಯ ಪೊಲೀಸರು ಬಂಧಿಸಿದ್ದ ಸಂತೋಷ್ ರಾವ್ ಅವರನ್ನು 2023ರಲ್ಲಿ ನ್ಯಾಯಾಲಯ ಬಿಡುಗಡೆ ಮಾಡಿತ್ತು. ತೀರ್ಪಿನಲ್ಲಿ ಸಾಕ್ಷ್ಯ ನಾಶ ಮಾಡಿದ ದೋಷವನ್ನು ನ್ಯಾಯಾಲಯವೇ ಉಲ್ಲೇಖಿಸಿತ್ತು.

