ದಿನಕ್ಕೊಂದು ಬಗೆಯ ಹೇಳಿಕೆ ಕೊಟ್ಟು ನಾಟಕ ಮಾಡುತಿದ್ದ ಸುಜಾತಾ ಭಟ್ ತನ್ನ ಮಗಳು ಇಲ್ಲವೇ ಇಲ್ಲ ಇದೆಲ್ಲ ತನ್ನ ನಾಟಕ ಎಂದು ಒಪ್ಪಿಕೊಂಡು ಈ ನಾಟಕಕ್ಕೆ ಸೂತ್ರಧಾರ ಗಿರೀಶ್ ಮಟ್ಟಣ್ಣನವರ್ ಎಂಬ ಹೊಸ ಬಾಂಬ್ ಹಾಕಿದ್ದಾರೆ. ತನ್ನ ಆಸ್ತಿಗಾಗಿ ಈ ಸುಳ್ಳು ಹೇಳಿದೆ ಎಂದು ಒಪ್ಪಿಕೊಂಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.ತನ್ನ ಸಹಿ ಇಲ್ಲದೆ ತನ್ನ ಚಿಕ್ಕಪ್ಪ ತನ್ನ ತಾತನ ಆಸ್ತಿಯನ್ನು ಧರ್ಮಸ್ಥಳಕ್ಕೆ ದಾನ ಮಾಡಿದ ಕಾರಣ ಈ ರೀತಿ ಸುಳ್ಳು ಹೇಳಿದೆ ಎಂದು ಬಾಯಿಬಿಟ್ಟಿದ್ದಾರೆ.

ಈ ಮಹಿಳೆ ಅನನ್ಯ ಭಟ್ ಸ್ನೇಹಿತರೊಂದಿಗೆ ಬಂದಾಗ ಕಾಣೆಯಾದಳು ಎಂದು ಒಮ್ಮೆ ಹೇಳಿದರೆ ಮತ್ತೂಂದು ಮಾಧ್ಯಮದಲ್ಲಿ ತನ್ನ ಎದುರೇ ಅನನ್ಯ ಭಟ್ ಅವರನ್ನು ಬಾಹುಬಲಿ ಬೆಟ್ಟದಿಂದ ಅಪಹರಣ ಮಾಡಿದರು ಎಂದು ಹೊಸ ಸುಳ್ಳನ್ನು ಹೇಳಿದ್ದಾರೆ. ತನ್ನ ಬಣ್ಣ ಬಣ್ಣದ ಸುಳ್ಳಿನಿಂದ ಜನರಿಗೆ ಬಣ್ಣ ಬಣ್ಣದ ಕಾಗೆಯನ್ನು ತೋರಿಸುತ್ತಿದ್ದಾರೆ ಈ ಸುಜಾತಾ ಭಟ್. ನೈಜ ಹೋರಾಟದ ದಿಕ್ಕು ತಪ್ಪಿಸುವ ಉದ್ದೇಶದಿಂದ ಈ ತರ ನಾಟಕವಾಡುವ ಸುಜಾತಾ ಭಟ್ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವ ತನಿಖೆ ಆಗಬೇಕು , ಇಂತ ನಕಲಿಗಳಿಂದ ನೈಜ ಹೋರಾಟಗಾರರ ಮಾನ ಮರ್ಯಾದೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ.

