ಸುಳ್ಯ: ಮುಂಗಾರು ವಾಲಿಬಾಲ್ ಅಕಾಡೆಮಿ (ರಿ) ಸುಳ್ಯ ಆಶ್ರಯದಲ್ಲಿ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಮತ್ತು ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿದೆ.

2025ರ ಆಗಸ್ಟ್ 24ರಂದು ಬೆಳಿಗ್ಗೆ 9 ಗಂಟೆಗೆ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ಆರಂಭಗೊಳ್ಳುವ ಈ ಕ್ರೀಡಾಕೂಟದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ವಿಭಾಗದ ಬಾಲಕ-ಬಾಲಕಿಯರ ತಂಡಗಳು ಸ್ಪರ್ಧಿಸಲಿವೆ.
ಕಾರ್ಯಕ್ರಮಕ್ಕೆ ಸಂಚಾಲಕರಾದ ರಿಯಾಝ್ ಕಟ್ಟೆಕ್ಕಾರ್, ಮುಂಗಾರು ವಾಲಿಬಾಲ್ ಅಕಾಡೆಮಿ (ರಿ) ಸುಳ್ಯ ಅವರ ನೇತೃತ್ವವಿದ್ದು, ಎಲ್ಲಾ ಕ್ರೀಡಾಭಿಮಾನಿಗಳನ್ನು ಸ್ವಾಗತಿಸಲಾಗಿದೆ.

