ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ಈ ನಡುವೆ 2 ವರ್ಷದ ಹಿಂದೆ ತನ್ನದೇ ಪಕ್ಷದ ಶಾಸಕ ಹರೀಶ್ ಪೂಂಜಾ ಹೇಳಿದ ಹೇಳಿಕೆ ಬಗ್ಗೆ ತಿಳಿದೇ ವಿರೋಧ ಪಕ್ಷ ನಾಯಕ ಆರ್ ಅಶೋಕ್ ಮಹೇಶ್ ಶೆಟ್ಟಿ ತಿಮರೋಡಿ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಇದಕ್ಕೆ ಉತ್ತರಿಸಿದ ಗೃಹ ಸಚಿವರು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕ್ರಮಕ್ಕೆ ಸದನದಲ್ಲೇ ಆದೇಶ ಮಾಡಿದ್ದಾರೆ.

ಈ ವಿಡಿಯೋದ ಅಸಲೀಯತ್ತು ಬೇರೆಯದಾಗಿದ್ದು ವಾಸ್ತವದಲ್ಲಿ ಹರೀಶ್ ಪೂಂಜಾ ಅವರೇ ಮೊದಲು ಆರೋಪ ಮಾಡಿದ್ದು ಎಂದು ಸಾಬೀತು ಮಾಡುವ ವಿಡಿಯೋ ವೈರಲ್ ಆಗುತ್ತಿದೆ. ಅಶೋಕ್ ಬಿಟ್ಟ ಬಾಣ ತಿರುಗಿ ತನ್ನದೇ ಪಕ್ಷದ ಶಾಸಕ ಹರೀಶ್ ಪೂಂಜಾ ಗೆ ಮುಳುವಾಗುವ ಸಾದ್ಯತೆ ಇದೆ ಎಂದು ತಿಳಿದು ಬಂದಿದೆ.

