ಭಾರತ-ಚೀನಾ ಸಂಬಂಧ ಸುಧಾರಣೆಗೆ ‘ಆನೆ-ಡ್ರ್ಯಾಗನ್‌’ ನೃತ್ಯ ಪ್ರಸ್ತಾಪ

ಭಾರತ-ಚೀನಾ ಸಂಬಂಧ ಸುಧಾರಣೆಗೆ ‘ಆನೆ-ಡ್ರ್ಯಾಗನ್‌’ ನೃತ್ಯ ಪ್ರಸ್ತಾಪ

ಬೀಜಿಂಗ್: ರಾಜತಾಂತ್ರಿಕವಾಗಿ ಹದಗೆಟ್ಟಿದ್ದ ಸಂಬಂಧವನ್ನು ಸುಧಾರಿಸಲು ಚೀನಾ ಮತ್ತೆ ಭಾರತಕ್ಕೆ ‘ಆನೆ-ಡ್ರ್ಯಾಗನ್‌’ ಜಂಟಿ ನೃತ್ಯದ ಆಫರ್‌ ನೀಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಒಂದು ತಪ್ಪು ನಿರ್ಧಾರ, ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳಾದ ರಷ್ಯಾ, ಚೀನಾ ಮತ್ತು ಭಾರತವನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತಿರುವುದಾಗಿ ವಿಶ್ಲೇಷಕರು ಹೇಳುತ್ತಾರೆ.

ಚೀನಾದ ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ, “ಜಂಟಿ ನೃತ್ಯ ಮಾಡಲು ಇದೇ ಸರಿಯಾದ ಸಮಯ” ಎಂದು ಭಾರತಕ್ಕೆ ಸಂದೇಶ ನೀಡಲಾಗಿದೆ. ಚೀನಾ ತನ್ನ ಅಧಿಕೃತ mouthpiece ಆಗಿರುವ ಗ್ಲೋಬಲ್‌ ಟೈಮ್ಸ್‌ ಮೂಲಕ, “ಭಾರತ ಮತ್ತು ಬೀಜಿಂಗ್ ಜಾಗತಿಕ ದಕ್ಷಿಣದ ಎರಡು ಪ್ರಮುಖ ಸದಸ್ಯ ರಾಷ್ಟ್ರಗಳಾಗಿದ್ದು, ‘ಡ್ರ್ಯಾಗನ್ ಮತ್ತು ಆನೆಯ ಪಾಸ್ ಡಿ ಡ್ಯೂಕ್ಸ್’ ಎರಡೂ ರಾಷ್ಟ್ರಗಳಿಗೆ ಸೂಕ್ತ ಆಯ್ಕೆ ಆಗಲಿದೆ” ಎಂದು ತಿಳಿಸಿದೆ.

ಇದರಿಂದ, ಭಾರತ-ಚೀನಾ ನಡುವೆ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧ ವೃದ್ಧಿಸಲು ಬೀಜಿಂಗ್ ತೀವ್ರ ಆಸಕ್ತಿ ತೋರಿಸುತ್ತಿರುವುದು ಸ್ಪಷ್ಟವಾಗಿದೆ.

ಅಂತರಾಷ್ಟ್ರೀಯ ಮನೋರಂಜನೆ ರಾಷ್ಟ್ರೀಯ