ಸಮುದಾಯಗಳ ನಡುವೆ ವೈಮನಸ್ಸು ಮೂಡುವಂತೆ ಮಾಡಿದ ಆರೋಪ ಬೆಳ್ತಂಗಡಿ ಠಾಣೆಯಲ್ಲಿ ಪತ್ರಕರ್ತ ವಸಂತ ಗಿಳಿಯಾರ್‌ ವಿರುದ್ಧ ಎಫ್.ಐ.ಆರ್. ದಾಖಲು

ಸಮುದಾಯಗಳ ನಡುವೆ ವೈಮನಸ್ಸು ಮೂಡುವಂತೆ ಮಾಡಿದ ಆರೋಪ ಬೆಳ್ತಂಗಡಿ ಠಾಣೆಯಲ್ಲಿ ಪತ್ರಕರ್ತ ವಸಂತ ಗಿಳಿಯಾರ್‌ ವಿರುದ್ಧ ಎಫ್.ಐ.ಆರ್. ದಾಖಲು

ಪೇಸ್‌ಬುಕ್‌ ಖಾತೆಯಲ್ಲಿ ಧರ್ಮಗಳ ನಡುವೆ ಹಾಗೂ ಸಮುದಾಯಗಳ ನಡುವೆ ವೈಮನಸ್ಸು ಮೂಡುವಂತೆ ಸಂದೇಶಗಳನ್ನು ಪ್ರಸಾರ ಮಾಡಿದ ಆರೋಪದಲ್ಲಿ ಪತ್ರಕರ್ತ ವಸಂತ ಗಿಳಿಯಾರ್‌ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಬೆಳ್ತಂಗಡಿ ನಿವಾಸಿ ಶೇಖರ ಲಾಯಿಲ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ವಸಂತ ಗಿಳಿಯಾರ್ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಅಕ್ರ : 84/2025, ಕಲಂ 196(1)(ಎ) ಮತ್ತು 353(2)ಭಾರತೀಯ ನ್ಯಾಯ ಸಂಹಿತೆ (BNS) 2023ರಂತೆ ಪ್ರಕರಣ ದಾಖಲಾಗಿದೆ.

  • BNS ಸೆಕ್ಷನ್ 196(1)(ಎ) – ಧರ್ಮ, ಜಾತಿ, ಭಾಷೆ, ಸ್ಥಳ ಅಥವಾ ಸಮುದಾಯಗಳ ನಡುವೆ ವೈಮನಸ್ಸು, ದ್ವೇಷ, ಶತ್ರುತ್ವವನ್ನು ಉಂಟುಮಾಡುವ ಉದ್ದೇಶದಿಂದ ಮಾಡಿದ ಮಾತು, ಬರಹ, ಚಿತ್ರ, ಅಥವಾ ಪ್ರಸಾರ. ಶಿಕ್ಷೆ: ಅತ್ಯಧಿಕ 3 ವರ್ಷ ಜೈಲು ಅಥವಾ ದಂಡ ಅಥವಾ ಎರಡೂ.
  • BNS ಸೆಕ್ಷನ್ 353(2) – ಧರ್ಮ ಅಥವಾ ಸಮುದಾಯ ಆಧಾರದ ಮೇಲೆ ವೈಮನಸ್ಸು, ದ್ವೇಷ, ಅಥವಾ ಶತ್ರುತ್ವವನ್ನು ಪ್ರೋತ್ಸಾಹಿಸುವ ಅಥವಾ ಉಂಟುಮಾಡುವ ಹೇಳಿಕೆಗಳು. ಶಿಕ್ಷೆ: ಅತ್ಯಧಿಕ 3 ವರ್ಷ ಜೈಲು ಅಥವಾ ದಂಡ ಅಥವಾ ಎರಡೂ.

ಒಂದುವೇಳೆ ಪ್ರಕರಣ ಸಾಬೀತಾದರೆ ಮೇಲಿನ ಶಿಕ್ಷೆ ಸಿಗುವ ಸಾಧ್ಯತೆ ಇದೆ. ಧರ್ಮಸ್ಥಳದ ವ್ಯಕ್ತಿಗಳ ಪರ ಬ್ಯಾಟಿಂಗ್ ಮಾಡುತ್ತಿದ್ದ ವಸಂತ ಗಿಳಿಯಾರ್ ಗೆ ಈ ಎಫ್ ಐ ಆರ್ ತಿಳಿಯದೆ ಬಂದ ಬೌನ್ಸರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅವರ ಧರ್ಮ ರಕ್ಷಣೆಯ ಗುತ್ತಿಗೆ ಇಲ್ಲಿಗೆ ನಿಲ್ಲಲಿದೆಯಾ? ಅಥವಾ ಎಂದಿನಂತೆ ಮುಂದುವರಿಯುವುದೇ ಎಂದು ಕಾದು ನೋಡುವ ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅಪರಾಧ ರಾಜ್ಯ ರಾಷ್ಟ್ರೀಯ