ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್, ಮಾಜಿ ಅಧ್ಯಕ್ಷ ಕೇಶವ ಗೌಡ ಮತ್ತು ಡಾ ಮಹಾಬಲ ಶೆಟ್ಟಿ ವಿರುದ್ಧ ಎಸ್ ಐ ಟಿ ಗೆ ದೂರು

ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್, ಮಾಜಿ ಅಧ್ಯಕ್ಷ ಕೇಶವ ಗೌಡ ಮತ್ತು ಡಾ ಮಹಾಬಲ ಶೆಟ್ಟಿ ವಿರುದ್ಧ ಎಸ್ ಐ ಟಿ ಗೆ ದೂರು

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ
ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್, ಮಾಜಿ ಅಧ್ಯಕ್ಷ ಕೇಶವ ಗೌಡ ಮತ್ತು ಡಾ ಮಹಾಬಲ ಶೆಟ್ಟಿ ವಿರುದ್ಧ ಹೋರಾಟಗಾರ ದಿನೇಶ್‌ ಗಾಣಿಗ ಎಸ್ ಐ ಟಿ ಗೆ ದೂರು ನೀಡಿದ್ದಾರೆ.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮತ್ತು ಮಾಜಿ ಅಧ್ಯಕ್ಷರು ತಾವು ನೂರಾರು ಅನಾಥ ಹೆಣಗಳನ್ನು ಊತಿರುವ ಬಗ್ಗೆ ಹೇಳುತ್ತಿದ್ದಾರೆ, ಈಗ ಅನಾಮಿಕ ವ್ಯಕ್ತಿ ತೋರಿಸಿರುವುದನ್ನೇ ಮುಂದೆ ಅವರು ಇದೇ ಜಾಗದಲ್ಲಿಯೇ ನಾವೇ ಊತಿದ್ದೆವು ಎನ್ನಬಹುದು.

ಈಗಾಗಲೆ ಕೆಲವು ಭಾಗಗಳಲ್ಲಿ ತಾವೇ ಹೂತಿದ್ದೇವೆ ಎಂದು ಮಾದ್ಯಮದ ಮೂಲಕ ಹೇಳುತ್ತಿದ್ದಾರೆ ಹಾಗಾಗಿ ಮೊದಲು ಉಪಾಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ ತೋರಿಸುವ ಜಾಗದಲ್ಲಿ ಅಗೆಯ ಬೇಕು ಮತ್ತು ಒಂದು ಕಡೆ ಕೇಶವ ಗೌಡ ಅನಾಮಿಕ ವ್ಯಕ್ತಿ ಕಳ್ಳ ನಾವೇ ಅವನನ್ನು ಕೆಲಸದಿಂದ ವಜಾ ಮಾಡಿದ್ದು ಎನ್ನುತ್ತಿದ್ದಾರೆ ಹಾಗಿದ್ದರೆ ಅನಾಮಿಕ ವ್ಯಕ್ತಿ ಕೇಶವ ಗೌಡರ ಜೊತೆ ಕೆಲಸಕ್ಕೆ ಇದ್ದವನೇ?

ಡಾ ಮಹಾಬಲ ಶೆಟ್ಟಿ ತಾವೇ 70 ಹೆಣ ಪೋಸ್ಟ್ ಮಾಟಂ ಮಾಡಿ ಹೂತು ಹಾಕಿದ್ದೇವೆ ಎಂದು ಹೇಳುತ್ತಿದ್ದಾರೆ ಹಾಗಾಗಿ ಅವರು ಮೂವರ ವಿರುದ್ಧ ದೂರು ನೀಡಿದ್ದೇನೆ ಎಂದು ಈ ದಿನ ಡಾಟ್ ಕಾಮ್ ಗೆ ನೀಡಿದ ಸಂದರ್ಶನದಲ್ಲಿ ಹೋರಾಟಗಾರ ದಿನೇಶ್‌ ಗಾಣಿಗ ತಿಳಿಸಿದ್ದಾರೆ.

ಅಪರಾಧ ರಾಜ್ಯ ರಾಷ್ಟ್ರೀಯ