ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಇದರ ಹಿಂದೆ ಕಾಣದ ಕೈಗಳು ಇದೆ ಎಂದು ಪತ್ರಿಕಾಗೋಷ್ಠಿ ನಡೆಸಲು ಬಂದ ಮಂಗಳೂರು ಬಿಜೆಪಿ ನಾಯಕರು ಮತ್ತು ಪತ್ರಕರ್ತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ.

“ಹಿಂದೂಗಳ ಹತ್ಯೆಯಾದಾಗ ಓಡೋಡಿ ಬರುವ ನೀವು, 13 ವರ್ಷಗಳಿಂದ ಹಿಂದೂ ಸಹೋದರಿ ಸೌಜನ ಹತ್ಯೆ ಪ್ರಕರಣದಲ್ಲಿ ಮೌನ ವಹಿಸಿ, ಈಗ ಎಸ್ಐಟಿ ತನಿಖೆ ತೀವ್ರಗೊಂಡು ಅಪರಾಧಿಗಳಿಗೆ ಶಿಕ್ಷೆಯಾಗುವ ಸಾಧ್ಯತೆ ಇರುವ ಸಂದರ್ಭದಲ್ಲಿ ಧರ್ಮಸ್ಥಳದ ರಕ್ಷಣೆಗೆ ಬಂದಿದ್ದೀರಿ” ಎನ್ನುವ ಪತ್ರಕರ್ತರ ಪ್ರಶ್ನೆಗೆ ಕುಪಿತರಾದ ಬಿಜೆಪಿ ನಾಯಕರು ಪತ್ರಕರ್ತರ ಮೇಲೆ ಹರಿಹಾಯ್ದರು ಎಂದು ತಿಳಿದು ಬಂದಿದೆ.
ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಬಿಜೆಪಿ ನಾಯಕರ ಈ ನಡೆ ನೈಜ ಅಪರಾಧಿಗಳನ್ನು ರಕ್ಷಿಸುವ ಪ್ರಯತ್ನವೆಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

