ಧರ್ಮಸ್ಥಳದಲ್ಲಿ ನಿನ್ನೆ ನಡೆದ ಯೂಟ್ಯೂಬರ್ ಗಳ ಮೇಲಿನ ಹಲ್ಲೆಗಳನ್ನು ಸಮರ್ಥಿಸಿ ಪತ್ರಿಕಾ ಧರ್ಮ ಮರೆತು ಧರ್ಮದೇಟು ಎಂದು ಲೇವಡಿ ಮಾಡಿ ತನ್ನ ಚಾನೆಲ್ ನ ವರದಿಗಾರ ಮತ್ತು ಕ್ಯಾಮೆರಾ ಮ್ಯಾನ್ ಗೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಮಾಡಿದ ಆರೋಪದಲ್ಲಿ ಸುವರ್ಣ ನ್ಯೂಸ್ ನ ಅಜಿತ್ ಹನುಮಕ್ಕನವರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಪ್ರತ್ಯಕ್ಷದರ್ಶಿ ಉಜಿರೆಯ ಗಣೇಶ್ ಶೆಟ್ಟಿ ಎಂಬವರ ದೂರಿನ ಮೇರೆಗೆ ಎಫ್ ಐ ಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.



ಇದಕ್ಕೆ ಪೂರಕವಾಗಿ ಸುವರ್ಣ ನ್ಯೂಸ್ ವರದಿಗಾರ ಮತ್ತು ಕ್ಯಾಮರಾ ಮ್ಯಾನ್ ಗೆ ಯಾವದೇ ರೀತಿಯ ಹಲ್ಲೆ ನಡೆದಿಲ್ಲ ಎನ್ನುವ ಬೆನಕಾ ಆಸ್ಪತ್ರೆಯ ವೈದ್ಯರು ನೀಡಿರುವ ಎನ್ನುವ ವರದಿಯ ಪ್ರತಿಗಳು ಮತ್ತು ಸುವರ್ಣ ನ್ಯೂಸ್ ನ ವರದಿಗಾರ ತಮಗೆ ಯಾವುದೇ ಹಲ್ಲೆ ಆಗಿಲ್ಲ ಎಂದು ಹೇಳುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

