ಧರ್ಮಸ್ಥಳದಲ್ಲಿ ವರದಿಗಾಗಿ ಬಂದ ಕುಡ್ಲ ರಾಂ ಪೇಜ್, ದಿ ಯುನೈಟೆಡ್ ಮೀಡಿಯಾ, ಸಂಚಾರಿ ಸ್ಟೂಡಿಯೊ ಚಾನೆಲ್ ನವರ ಮೇಲೆ ಮಾರಣಾಂತಿಕ ಹಲ್ಲೆ ಕ್ಯಾಮೆರಾ ಹಾನಿ, ಆಸ್ಪತ್ರೆಗೆ ದಾಖಲು

ಧರ್ಮಸ್ಥಳದಲ್ಲಿ ವರದಿಗಾಗಿ ಬಂದ ಕುಡ್ಲ ರಾಂ ಪೇಜ್, ದಿ ಯುನೈಟೆಡ್ ಮೀಡಿಯಾ, ಸಂಚಾರಿ ಸ್ಟೂಡಿಯೊ ಚಾನೆಲ್ ನವರ ಮೇಲೆ ಮಾರಣಾಂತಿಕ ಹಲ್ಲೆ ಕ್ಯಾಮೆರಾ ಹಾನಿ, ಆಸ್ಪತ್ರೆಗೆ ದಾಖಲು

ಧರ್ಮಸ್ಥಳದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಒಂದು ಕಡೆ ತಲೆಬುರುಡೆ ಶೋಧ ಕಾರ್ಯ ನಡೆಯುತ್ತಿದ್ದರೆ ಇನ್ನೊಂದೆಡೆ ಕೇಡಿ ಗ್ಯಾಂಗ್ ಆರ್ಭಟಕ್ಕೆ ಯೂಟ್ಯೂಬ್ ಚಾನೆಲ್ 3 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ಅಷ್ಟೇ ಚಾನೆಲ್ ಒಂದರ ಸಂದರ್ಶನದಲ್ಲಿ ತಮಗೆ ಜೀವ ಭಯ ಇಲ್ಲ ಎಂದ ಕುಡ್ಲ ರಾಂಪೇಜ್ ನ ಅಜಯ್ ಅಂಚನ್ ಸೇರಿದಂತೆ ಯುನೈಟೆಡ್ ಮೀಡಿಯಾ , ಸಂಚಾರಿ ಸ್ಟುಡಿಯೋ ವರದಿಗಾರರ ಮೇಲೆ 50 ಜನ ಗೂಂಡಾಗಳು ಏಕಾಏಕಿ ಹಲ್ಲೆ ಮಾಡಿದ ಘಟನೆ ನಡೆದಿದೆ.

ಬಿಗ್ ಬಾಸ್ ಖ್ಯಾತಿಯ ರಜತ್ ಸೌಜನ್ ಮನೆಗೆ ಭೇಟಿ ಮಾಡುವ ವೇಳೆ ಚಿತ್ರೀಕರಣ ನಡೆಸುತ್ತಿದ್ದ ಈ 3 ಜನ ಯೂಟ್ಯೂಬ್ ಚಾನಲ್ ನ ವರದಿಗಾರ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಅವರ ಕ್ಯಾಮೆರಾ ಪುಡಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ವರೆಗೆ ಮಾದ್ಯಮದ ಮೇಲೆ ಬ್ಲಾಕ್ , ಬ್ಯಾನ್ ಮಾಡಿ ತಮ್ಮ ಪೌರುಷ ತೋರಿಸುತ್ತಿದ್ದವರು ಈಗ ಕಾನೂನು ಕೈಗೆ ತೆಗೆದುಕೊಂಡು ನೇರವಾಗಿ ಹಲ್ಲೆಗೆ ಮುಂದಾಗಿದ್ದಾರೆ ಎಂದು ಹೋರಾಟಗಾರರು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.

ಅಪರಾಧ ರಾಜ್ಯ ರಾಷ್ಟ್ರೀಯ