ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡ ಹಾಗೂ ಮೊಸರುಕುಡಿಕೆ ಉತ್ಸವ ಸಮಿತಿ ಸುಳ್ಯ ದಕ್ಷಿಣ ಕನ್ನಡದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್ನ ಸ್ಥಾಪನಾ ದಿನಾಚರಣೆ ಅಂಗವಾಗಿ “ಮೊಸರುಕುಡಿಕೆ ಉತ್ಸವ ಹಾಗೂ ಶೋಭಾಯಾತ್ರೆ” ಆಯೋಜಿಸಲಾಗಿದೆ.

ಈ ಉತ್ಸವ 2025ರ ಆಗಸ್ಟ್ 19ರಂದು (ಮಂಗಳವಾರ) ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಈ ಪ್ರಯುಕ್ತವಾಗಿ ಆಗಸ್ಟ್ 10, 2025 (ಆದಿತ್ಯವಾರ) ಬೆಳಿಗ್ಗೆ 10 ಗಂಟೆಗೆ ಇದೇ ಸ್ಥಳದಲ್ಲಿ ಮಕ್ಕಳಿಗಾಗಿ “ಶ್ರೀ ಕೃಷ್ಣ ಚಿತ್ರ ಬಿಡಿಸುವ ಸ್ಪರ್ಧೆ” ನು ಆಯೋಜಿಸಲಾಗಿದೆ. ಸ್ಪರ್ಧೆಯು ಮೂರು ವಿಭಾಗಗಳಲ್ಲಿ — ತರಗತಿ 1ರಿಂದ 4, 5ರಿಂದ 7 ಮತ್ತು 8ರಿಂದ 10ರ ವಿದ್ಯಾರ್ಥಿಗಳಿಗೆ ನಡೆಯಲಿದೆ. ಭಾಗವಹಿಸುವ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುತ್ತದೆ.
ಚಿತ್ರ ಬಿಡಿಸುವ ಸ್ಪರ್ಧೆ ಸಾಹಿತ್ಯ ಮತ್ತು ಪೆನ್ಸಿಲ್ ಬಳಸಿ ಮಾತ್ರ ಆಯೋಜಿಸಲಾಗುವುದು. ಹಾಳೆಗಳನ್ನು ಆಯೋಜಕರು ಒದಗಿಸಲಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾಗಿ ಆಯ್ಕೆಯಾಗುವವರಿಗೆ ಆಗಸ್ಟ್ 19ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳ ಸಮ್ಮುಖದಲ್ಲಿ ಬಹುಮಾನ ವಿತರಣೆ ನಡೆಯಲಿದೆ.