ದರ್ಶನ್ ಅಭಿಮಾನಿಗಳಿಂದ ಹಲ್ಲೆಗೆ ಯತ್ನ ಆರೋಪ: ನಟ ಪ್ರಥಮ್ ಉಪವಾಸ ಸತ್ಯಾಗ್ರಹ

ದರ್ಶನ್ ಅಭಿಮಾನಿಗಳಿಂದ ಹಲ್ಲೆಗೆ ಯತ್ನ ಆರೋಪ: ನಟ ಪ್ರಥಮ್ ಉಪವಾಸ ಸತ್ಯಾಗ್ರಹ

ಬೆಂಗಳೂರು:ದರ್ಶನ್ ಅಭಿಮಾನಿಗಳಿಂದ ತನಗೆ ಬೆದರಿಕೆ ಮತ್ತು ಹಲ್ಲೆ ಯತ್ನ ನಡೆದಿದೆ ಎಂದು ಆರೋಪಿಸಿ ನಟ ಪ್ರಥಮ್ ಎಸ್ಪಿ ಗೆ ದೂರು ನೀಡಿ, ಬಳಿಕ ದರ್ಶನ್ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಘಟನೆ ನಡೆದಿದೆ.

ಪ್ರಥಮ್ ಹಾಗೂ ರಕ್ಷಕ್ ಬುಲೆಟ್ ಅವರು ದೇವಸ್ಥಾನಕ್ಕೆ ತೆರಳಿರುವ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಎಂದು ಹೇಳಿದ ಕೆಲವರು ನಟ ಪ್ರಥಮ್ ಗೆ ಮಾರಕಾಯುದ ತೋರಿಸಿ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದರು ಎಂದು ಪ್ರಥಮ್ ದೂರಿದ್ದಾರೆ. ಈ ಘಟನೆಗೆ ಪ್ರಥಮ್ ಈ ಹಿಂದೆ ದರ್ಶನ್ ಬಗ್ಗೆ ಕೆಟ್ಟದಾಗಿ ವಿಡಿಯೋ ಮಾಡಿದ್ದರು ಎಂಬ ಕಾರಣ ಎಂದು ಅವರು ಹೇಳಿದ್ದಾರೆ. ಹೀಗಾಗಿ ತಮಗೆ ಏನಾದರೂ ಆದರೆ ಅದಕ್ಕೆ ದರ್ಶನ್ ನೇರ ಹೊಣೆ ಅಂತ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅಪರಾಧ ಮನೋರಂಜನೆ